ಐಂದ್ರಿತಾ ರೇ ಯ ನ್ಯೂ ಲುಕ್

16 Apr 2018 5:48 PM | Entertainment
610 Report

ಸ್ಯಾಂಡಲ್ ವುಡ್ ನಲ್ಲಿ ಗೊಂಬೆ ಅಂದ್ರೆ ನೆನಪಾಗೋದು ನಟಿ ಐಂದ್ರತಾ ರೇ ಅವರಿಗೆ ಈಗ ಹುಟ್ಟುಹಬ್ಬದ ಸಂಭ್ರಮ. 2008 ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಐಂದ್ರಿತಾ ತಮ್ಮ ಅಭಿನಯದ ಮೂಲಕವೇ ಸಾಕಷ್ಟು ಜನ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಐಂದ್ರಿತಾ ರೇ ಇತ್ತಿಚಿಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆನೆ.

'ಚೌಕಾ' ಸಿನಿಮಾ ಮುಗಿದ ಮೇಲೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಐಂದ್ರಿತಾ ಸದ್ಯ 'ಗರುಡ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. Rambo2 ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಸದ್ಯ Rambo2 ಮತ್ತು ಗರುಡ ಚಿತ್ರದ ಐಂದ್ರಿತಾ ಫೋಸ್ಟರ್ ಬಿಡುಗಡೆ ಆಗಿದ್ದು ಆಂಡಿ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ತಿಳಿದು ಬರುತ್ತದೆ.

Sponsored