ಅಂತು ಇಂತು ಸುಹಾನಾ ಸೈಯದ್ ನ ಸಿನಿ ಜರ್ನಿ ಶುರುವಾಯ್ತು

ನೀನೆ ರಾಮ ನೀನೆ ಅಲ್ಲ ನೀನೆ ಯೇಸು ಎಂದು ಎಲ್ಲಾ ಧರ್ಮದವರನ್ನು ಒಂದೆ ಎಂದು ಹೇಳಿದ ಸುಹಾನ ಸೈಯದ್ ಈಗ ಎಲ್ಲಿದ್ದಾರೆ ಅಂತ ಗೊತ್ತಾ?
ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹಾಡಿದ್ದ ಆಲ್ಮೋಸ್ಟ್ ಎಲ್ಲಾ ಗಾಯಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಈಗಾಗಲೇ ಸಿಕ್ಕಿದೆ. ಈಗ ಗಾಯಕಿ ಸುಹಾನ ಸೈಯದ್ ಅವರಿಗೆ ಸಹ ಸಿನಿಮಾದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. 'ಸ್ಟೇಟ್ ಮೆಂಟ್ 8/11' ಎಂಬ ಹೊಸ ಸಿನಿಮಾದಲ್ಲಿ ಹಾಡುವ ಮೂಲಕ ಸುಹಾನ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದಾರೆ. 'ನರನಾಡಿ ನುಡಿಯುತ್ತೆ ಹಿಂದುಸ್ತಾನ್..' ಎಂಬ ಹಾಡಿಗೆ ಸುಹಾನ ಧ್ವನಿ ಗೂಡಿಸಿದ್ದಾರೆ.. 'ಸ್ಟೇಟ್ ಮೆಂಟ್ 8/11' ಚಿತ್ರದ ದೇಶಭಕ್ತಿ ಗೀತೆ ಇದಾಗಿದೆ. ಇದೊಂದು ಕಂಪ್ಲೀಟ್ ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಅವರ ಸಂಗೀತ ಹಾಡಿನಲ್ಲಿದೆ. ಅಪ್ಪಿ ಪ್ರಸಾದ್ ಸಿನಿಮಾಗೆ ನಿರ್ದೇಶನವನ್ನು ಮಾಡಿದ್ದಾರೆ. ಸಿನಿಮಾದ ಪ್ರಮುಖ ಅಂಶಗಳಲ್ಲಿ ಈ ಹಾಡು ಕೂಡ ಒಂದಾಗಿದೆ. ಸುಹಾನ ಸೈಯದ ಹೀಗೆ ನಮ್ಮ ಕನ್ನಡ ಚಿತ್ರರಂಗಕ್ಕೆ ಸಾಲು ಸಾಲು ಹಾಡುಗಳನ್ನು ಹಾಡಲಿ ಅನ್ನೋದು ಎಲ್ಲರ ಆಶಯ.
Comments