ಅಭಿಮಾನಕೆ ಅಭಿಮಾನಿ ಈ ಸಾರಥಿ

16 Apr 2018 3:08 PM | Entertainment
515 Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹಾಗೂ ಬ್ಯುಸಿಯಿರುವ ನಟ. ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗೂ ಯಜಮಾನ ಚಿತ್ರ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಇತ್ತೀಚಿಗಷ್ಟೆ ಅನುವು ಮಾಡಿಕೊಂಡು ಅಭಿಮಾನಿಗಳ ಆಸೆ ಪೂರೈಸಲು ಮುಂದಾಗಿದ್ದರು. ದರ್ಶನ್ ಹಾಗೂ ದಿನಕರ್ ಹೆಸರಿನಲ್ಲಿ ಅಭಿಮಾನಿಗಳೆಲ್ಲಾ ಸೇರಿ ಪ್ರತಿವರ್ಷ ಕ್ರಿಕೆಟ್ ಮ್ಯಾಚ್ ನಡೆಸುತ್ತಾ ಬಂದಿದ್ದಾರೆ. ಈ ವರ್ಷವೂ ಎರಡು ದಿನಗಳ ಕ್ರಿಕೆಟ್ ಮ್ಯಾಚ್ ಅನ್ನು ಆಡಿಸಲಾಯ್ತು. ರಾಜ್ಯದ ಆಯ್ದ ಜಿಲ್ಲೆಗಳಿಂದ ದರ್ಶನ್ ಅಭಿಮಾನಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಿ ಸಂಭ್ರಮವನ್ನು ಪಟ್ಟರು.

Edited By

Manjula M

Reported By

Manjula M

Comments