ಈಕೆ ಅಮ್ಮನಂತೆ ಫುಲ್ ಫೇಮಸ್ ಆದ ನಟಿಯ ಮಗಳು

ಸ್ಯಾಂಡಲ್ ವುಡ್ ನ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದ ನಟಿ ಶ್ವೇತಾ ಶ್ರೀ ವಾತ್ಸಾವ್ ಅವರ ಪುತ್ರಿ ಅಶ್ಮಿತಾ ಶ್ರೀ ವಾತ್ಸಾವ್ ಜನಿಸಿ ಇನ್ನೂ ಕೇವಲ 8ತಿಂಗಳಷ್ಟೆ ಕಳೆದಿದೆ. ಆದರೆ ಈಕೆ ಈಗಾಗಲೇ ಇನ್‌ಸ್ಟಾಗ್ರಾಂ ನಲ್ಲಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾರೆ.
ಅಶ್ಮಿತಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಇದ್ದು ಅದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ಫಾಲೋವರ್ಸ್ ಇದ್ದಾರೆ. ಅಶ್ಮಿತಾ ಆಟದ ವಿಡಿಯೋ ಮತ್ತು ಫೋಟೋಗಳನ್ನ ಆಕೆಯ ತಂದೆ ತಾಯಿ ಅಕೌಂಟ್ ನಲ್ಲಿ ಅಪ್ಲೋಂಡ್ ಮಾಡಲಾಗುತ್ತಿದೆ. ಸಣ್ಣ ಮಗುವಿನ ಪೋಟೋ ತೆಗೆದೆರೆ ದೃಷ್ಟಿ ಆಗುತ್ತೆ ಎಂದು ನಂಬುವವರ ಮಧ್ಯೆ ಅಶ್ಮಿತಾಳ ವಿಡಿಯೋ-ಫೋಟೋ ಸಾಕಷ್ಟು ಪ್ರಖ್ಯಾತಿ ಪಡೆದುಕೊಳ್ಳುವುದರ ಜೊತೆಯಲ್ಲಿ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡಿರುವುದು ಖುಷಿಯ ವಿಚಾರ. ಅಶ್ಮಿತಾ ಕೂಡ ಅಮ್ಮನಂತೆ ಮುಂದೊಂದಿನ ನಟಿಯಾದರೆ ಅಭಿಮಾನಗಳ ಸಂಖ್ಯೆ ಹೆಚ್ಚಾಗಿರುತ್ತದೆ ಅನ್ನೋದು ಇದರಿಂದಲೆ ಗೊತ್ತಾಗುತ್ತದೆ
Comments