ದಿ ವಿಲನ್ ಚಿತ್ರದಿಂದ ಸಿಕ್ತು ಗುಡ್ ನ್ಯೂಸ್

ಬಹು ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಕ್ಕಿದೆ ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರ ಆರಂಭವಾಗಿ ವರ್ಷ ಕಳೆದಿದ್ದರೂ ಕೂಡ ಚಿತ್ರದ ಕುರಿತಾಗಿ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗುತ್ತಾ ಹೋಗುತ್ತಿದೆ.
'ಜೋಗಿ' ಪ್ರೇಮ್ ನಿರ್ದೇಶನ, ಹಾಗೂ ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದ ಚಿತ್ರೀಕರಣವು ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶ-ವಿದೇಶಗಳಲ್ಲಿಯೂ ಕೂಡ ನಡೆಯುತ್ತಿದೆ. ಬಹು ತಾರಾಗಣದಲ್ಲಿ, ಅದ್ಧೂರಿ ವೆಚ್ಚದಲ್ಲಿ ದಿ ವಿಲನ್ ಚಿತ್ರವು ನಿರ್ಮಾಣವಾಗಿದೆ.ಈಗಾಗಲೇ ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಒಂದಿಷ್ಟು ಕೆಲಸಗಳು ಬಾಕಿ ಇವೆ. ಇದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿ ಶೀಘ್ರವೇ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಲಾಗಿದೆ. ಈ ನಡುವೆ ಇದೇ ತಿಂಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಗೂ ಕೂಡ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ. ಏನೇ ಆದರೂ ಕೂಡ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಅಭಿಮಾನಿಗಳು ಇನ್ನೂ ಸ್ವಲ್ಪ ದಿನ ಕಾಯಲೇ ಬೇಕು.
Comments