ಮಾಮ್ ಚಿತ್ರದ ಪಾತ್ರಕ್ಕಾಗಿ ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ

ಶ್ರೀದೇವಿ ಅವರು ಇಂದು ನಮ್ಮೊಂದಿಗೆ ಇದ್ದರೆ ಉತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಅವರೇ ತಮ್ಮ ಕೈಯಾರೆ ಪಡೆಯುವುದನ್ನು ನಾವು ನೋಡಬಹುದಿತ್ತೇನೋ..ಆದರೆ ಇಂದೂ ಅವರು ನಮ್ಮ ಜೊತೆ ಇಲ್ಲ, ಆದರೂ ಕೂಡ ಅವರ ನಟನೆಯ ಚಿತ್ರಗಳು ಅವರನ್ನ ನೆನಪಿಸುವಂತೆ ಮಾಡುತ್ತವೆ.
ಈಗಾಗಲೇ 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದ್ದು ಕ್ರೈಂ ಥ್ರಿಲ್ಲರ್ ಕಥೆಯನ್ನೊಂದಿರುವ 'ಮಾಮ್' (MOM) ಸಿನಿಮಾ ನಟನೆಗಾಗಿ ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ (ಮರಣೋತ್ತರ) ಲಭಿಸಿದೆ. ಚಿತ್ರದಲ್ಲಿನ ತನ್ನ ನಟನೆಯಿಂದ ಶ್ರೀದೇವಿ ಚಿತ್ರ ವಿಮರ್ಶಕರ ಹಾಗೂ ಪ್ರೇಕ್ಷಕರ ಮನವನ್ನು ಕೂಡ ಗೆದ್ದಿದ್ದಾರೆ. ತನ್ನ ಮಗಳನ್ನು ತೊಂದರೆಗೆ ಸಿಲುಕಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಜೀವಶಾಸ್ತ್ರ ಪ್ರಾಧ್ಯಾಪಕಿ ದೇವಕಿಯಾಗಿ ಶ್ರೀದೇವಿ ಈ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದಾರೆ. ನಿರ್ಮಾಪಕರಾದ ಶೇಖರ್ ಕಪೂರ್, ಬರಹಗಾರರಾದ ಇಮ್ತಿಯಾಜ್ ಹುಸೇನ್, ಸಾಹಿತಿಯಾದ ಮೆಹಬೂಬ್ ಹುಸೇನ್, ನಟಿ ಗೌತಮಿ ತಡಿಮಲ್ಲ ಜ್ಯೂರಿ ಸದಸ್ಯರಾಗಿದ್ದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿಗೆ 'ಮಾಮ್' ಚಿತ್ರದಲ್ಲಿನ ಶ್ರೀದೇವಿ ನಟನೆಗೆ ಪ್ರಶಸ್ತಿ ನೀಡುವುದಾಗಿ ಶಿಫಾರಸು ಮಾಡಿದ್ದರು ಎಂದು ತಿಳಿಸಲಾಗಿದೆ.
Comments