ಕಾವೇರಿ ಬಗ್ಗೆ ಮಾತನಾಡಿದ ಸಿಂಬು ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ?

ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ತಮಿಳು ನಟರಾದ ಸಿಂಬು ಮಾತನಾಡಿದ್ದರು. ''ನೀವು ಬಳಸಿ ಉಳಿದ ನೀರನ್ನು ನಮಗೆ ಕೊಡಿ. ಕನ್ನಡಿಗರು ಒಂದು ಲೋಟ ನೀರಿನ ವಿಡಿಯೋ ಮಾಡಿ'' ಎಂದಿದ್ದರು. ಅದೇ ರೀತಿ ನಿನ್ನೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ #uniteforhumanity ಹ್ಯಾಷ್ ಟ್ಯಾಗ್ ಬಳಸಿ ಒಂದು ಲೋಟ ನೀರು ನೀಡುವ ವಿಡಿಯೋವನ್ನು ಕೂಡ ಮಾಡಿದ್ದಾರೆ.
ಸಿಂಬು ಮಾತು ಕನ್ನಡಿಗರ ಮನ ಮುಟ್ಟಿತ್ತು ಅನಿಸುತ್ತದೆ. ತಮಿಳುನಾಡಿನಲ್ಲಿ ನಿಂತು ಈ ರೀತಿ ಮಾತನಾಡಿದ ಸಿಂಬುವಿನ ಧೈರ್ಯವನ್ನು ಎಲ್ಲರು ಮೆಚ್ಚಿಕೊಂಡರು. ಆದರೆ ಕಾವೇರಿ ಬಗ್ಗೆ ಮಾತನಾಡಿದ್ದ ಈ ನಟ ಈಗ ಕನ್ನಡ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕನ್ನಡದಲ್ಲಿ ಬರುತ್ತಿರುವ 'ಇರುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದಲ್ಲಿ ಸಿಂಬು ನಟಿಸುತ್ತಾರ ಎನ್ನುವ ಕುತೂಹಲವು ಕೂಡ ಎಲ್ಲರಲ್ಲೂ ಮೂಡಿದೆ.ಈ ಚಿತ್ರದ ನಿರ್ದೇಶಕ ಕಾಂತ ಕನ್ನಲ್ಲಿ ಈ ರೀತಿಯ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಸಿನಿಮಾದ ಒಂದು ವಿಶೇಷವಾದ ಹಾಡಿಗೆ ಸಿಂಬು ಅವರನ್ನು ಕರೆ ತರಬೇಕು ಎನ್ನುವುದು ಕಾಂತರವರ ಪ್ಲಾನ್ ಆಗಿದೆ. ಸದ್ಯದಲ್ಲಿಯೇ ಚಿತ್ರತಂಡ ಸಿಂಬು ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಿದೆಯಂತೆ ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು ವಿ.ಶ್ರೀಧರ್ ಸಂಭ್ರಮ್ ಸಂಗೀತವನ್ನು ನೀಡಿದ್ದಾರೆ.
Comments