ಐಪಿಎಲ್ ನಲ್ಲಿಯೂ ಮಿಂಚಲಿದ್ದಾಳೆ ಕಣ್ಸನ್ನೆಯ ಹುಡುಗಿ
ಒಂದೇ ಒಂದು ರಾತ್ರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ನಿದ್ದೆ ಗೆದ್ದ ಪೋರಿ ಪ್ರಿಯಾ ವಾರಿಯರ್.
ಈಕೆಯ ಕಣ್ಸನ್ನೆಯ ನೋಟಕ್ಕೆ ಯುವಕರಿಂದ ಹಿಡಿದು ವೃದ್ದರವರೆಗೆ ಎಲ್ಲರೂ ಕೂಡ ಪ್ಲ್ಯಾಟ್ ಆಗಿದ್ದಾರೆ. ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಕಣ್ಣು ಹುಬ್ಬೇರಿಸಿದ ಹುಡುಗಿ ಅತೀ ಶೀಘ್ರದಲ್ಲಿ ಐಪಿಎಲ್ ನಲ್ಲಿ ಭಾಗವಹಿಸುತ್ತಿದ್ದಾಳೆ.
ಮಂಚ್ ಪ್ರಚಾರಕ್ಕಾಗಿ ನೆಸ್ಲೆ ಐಪಿಎಲ್ ನಲ್ಲಿ ಮೈಟಿ20 ಎಂಬ ವಿಶೇಷ ಪ್ರಚಾರ ಶುರು ಮಾಡಿದೆ. ಈ ವಿಚಾರದ ಪ್ರಚಾರಕ್ಕಾಗಿ ಪ್ರಿಯಾ ಪ್ರಕಾಶ್ ಸಹಿ ಮಾಡಿದ್ದಾಳೆ ಎನ್ನಲಾಗಿದೆ. ಅಂದ್ರೆ ಐಪಿಎಲ್ ನಲ್ಲಿ ಪ್ರಸಾರವಾಗುವ ಮಂಚ್ ಜಾಹೀರಾತಿನಲ್ಲಿ ಪ್ರಿಯಾ ಕಾಣಿಸಿಕೊಳ್ಳಲಿದ್ದಾಳೆ ಎಂಬ ಮಾತು ಕೇಳಿ ಬರುತ್ತಿದೆ. ಅದು ನಿಜನೋ ಇಲ್ವೋ ಎಂಬದನ್ನು ನೋಡಲು ಕಾಯಲೇಬೇಕು.
Comments