ಮಗ ಭಾರತ ತಂಡವನ್ನು ಪ್ರತಿನಿಧಿಸುವ ಹಾಕಿ ಪ್ಲೇಯರ್ ಆಗಬೇಕು-ಶಾರುಖ್ ಖಾನ್

ಶಾರುಖ್ ಖಾನ್ ಎಂದರೆ ಸಾಕು ಬಾಲಿವುಡ್ ಸೂಪರ್'ಸ್ಟಾರ್ ಅಂತ ಎಲ್ಲರಿಗೂ ನೆನಪಾಗುತ್ತಾರೆ. ಆದರೆ ನನ್ನ ಮಗ ಮಾತ್ರ ಭಾರತ ಹಾಕಿ ತಂಡದಲ್ಲಿ ನೋಡುವ ಆಸೆಯಿದೆ ಎಂದು ಶಾರುಕ್ ಖಾನ್ ಹೇಳಿಕೊಂಡಿದ್ದಾರೆ.
2007ರಲ್ಲಿ ತೆರೆ ಕಂಡ 'ಚಕ್ ದೇ ಇಂಡಿಯಾ' ಸಿನಿಮಾದ ಮೂಲಕ ಹಾಕಿ ಬಗ್ಗೆ ತಮಗಿರುವ ಒಲವನ್ನು ಪ್ರದರ್ಶಿಸಿದ್ದ ಶಾರುಖ್ ಖಾನ್ , 'ನನ್ನ ಮಗನಿಗೀಗ 5 ವರ್ಷ. ಅವನಿನ್ನೂ ಇನ್ನೂ ಕ್ರಿಕೆಟ್ ಆಡಲು ಆರಂಭಿಸಿಲ್ಲ. ಫುಟ್ಬಾಲ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ. ಆದರೆ ಅವನು ಹಾಕಿ ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ' ಎಂದು ಶಾರುಖ್ ಹೇಳಿದ್ದಾರೆ. 'ಚಕ್ ದೇ ಇಂಡಿಯಾ' ಸಿನಿಮಾದಲ್ಲಿ ಶಾರುಖ್ ಖಾನ್ ಕಬೀರ್ ಖಾನ್ ಪಾತ್ರದಲ್ಲಿ ಭಾರತದ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಮುಂದೆ ಮಗ ಅಪ್ಪನ ತರ ಸೂಪರ್ ಸ್ಟಾರ್ ಆಗ್ತಾನೋ ಅಥವಾ ಅಪ್ಪನ ಆಸೆಯಂತೆ ಹಾಕಿ ಪ್ಲೇಯರ್ ಹಾಕ್ತಾನೋ ಅನ್ನೋದನ್ನ ತುಂಬಾ ವರ್ಷ ಕಾದು ನೋಡಲೇಬೇಕು
Comments