ಪುಟ್ಟ ಅಭಿಮಾನಿಯ ಅಭಿಮಾನಕ್ಕೆ ಸ್ಪಂದಿಸಿದ ಡಿ-ಬಾಸ್

10 Apr 2018 3:43 PM | Entertainment
789 Report

ಸ್ಯಾಂಡಲ್ ವುಡ್ ನ ಸ್ಟಾರ್ ಗಳಿಗೆ ಅಭಿಮಾನ ಬಳಗ ಸಾಕಷ್ಟಿರುತ್ತದೆ. ಆದರೆ ಅಪರೂಪದಲ್ಲೆ ಅಪರೂಪವಾದ ಅಭಿಮಾನಿಗಳನ್ನು ಹೊಂದಿರುವವರು ಬೆರಳೆಣಿಯಷ್ಟು ಸ್ಟಾರ್ ನಟರು ಪಾತ್ರ.ಅದರಲ್ಲಿ ನಮ್ಮ ದರ್ಶನ್ ಕೂಡ ಒಬ್ಬರು.

ಆದರೆ ಕೆಲ ಅಭಿಮಾನಿಗಳನ್ನ ಮಾತ್ರ ಸ್ಟಾರ್ ಗಳೇ ಕರೆಸಿಕೊಂಡು ಭೇಟಿ ಮಾಡಿ ಖುಷಿ ಪಡುತ್ತಾರೆ. ಅಂತದ್ದೆ ಸಾಲಿಗೆ ನಿಲ್ಲುವ ಅಭಿಮಾನಿಯೊಬ್ಬರನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ್ದಾರೆ. ಯಜಮಾನ ಸಿನಿಮಾ ಶೂಟಿಂಗ್ ವೇಳೆಯಲ್ಲಿ ದಾಸನನ್ನ ವಿಶೇಷ ಅಭಿಮಾನಿಯೊಬ್ಬರು ಹುಡುಕಿಕೊಂಡು ಸೆಟ್ ಗೆ ಬಂದಿದ್ದಾರೆ. ಪುಟ್ಟ ಅಭಿಮಾನಿಯನ್ನ ಕಂಡ 'ಡಿ ಬಾಸ್' ಕೂಡ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ ಅಪರೂಪದ ಅಭಿಮಾನಿ ಯನ್ನು ಭೇಟಿ ಮಾಡಿದ್ದಾರೆ.. ಆಕೆಯ ಹೆಸರು ಪೂರ್ವಿಕಾ. ಪೂರ್ವಿಕಾ ಎಂಬ ಅಭಿಮಾನಿ ದರ್ಶನ್ ಭೇಟಿ ಮಾಡಿರುವ ಪೂರ್ವಿಕಾ ಎಂಬ ಬಾಲಕಿ ಸಾಕಷ್ಟು ದಿನಗಳಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಕೆಟ್ಟ ನೀರು ತುಂಬಿಕೊಂಡು ನೋವು ಅನುಭವಿಸುತ್ತಿದ್ದಾಳೆ .ಆದರೂ ಕೂಡ ನಮ್ಮ ಡಿ-ಬಾಸ್ ಅನ್ನು ನೋಡಿದ ಮೇಲೆ ಸಖತ್ ಖುಷಿ ಪಟ್ಟಿದ್ದಾರೆ ಪೂರ್ವಿಕಾ.

Edited By

Manjula M

Reported By

Manjula M

Comments