ಕೆಕೆಆರ್ ತಂಡದ ಗೆಲುವಿನ ಕೇಕೆಗೆ ತಂದೆ- ಮಗಳು ದಿಲ್ ಖುಷ್..!!

ನಿನ್ನೆ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಟೀಂ ಪಾಲಿಗೆ ರೋಚಕ ದಿನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಅನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿ ವಿಜಯ ಸಾಧಿಸಿ ಗೆಲುವಿನ ಕೇಕೆ ಹಾಕಿತ್ತು ಕೆಕೆಆರ್.
ಪಂದ್ಯ ನೋಡಲು ಬಂದ ಕೆಕೆಆರ್ ತಂಡದ ಸಹ ಸಂಸ್ಥಾಪಕ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹಾಗೂ ಮಗಳು ಸುಹಾನಾ ಖಾನ್ ಸಾಕಷ್ಟು ಎಂಜಾಯ್ ಮಾಡಿದ್ದರು. ತಂದೆ- ಮಗಳನ್ನು ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದರು. ಕೆಕೆಆರ್ ಟೀಂ ಗೆದ್ದಾಗ ಶಾರುಕ್ ಕುಣಿದಾಡಿದ್ದು, ತಂದೆ-ಮಗಳ ಮಾತುಕತೆ, ಇಬ್ಬರೂ ಗಂಭೀರವಾಗಿ ಮ್ಯಾಚ್ ನೋಡ್ತಾ ಇದ್ದಿದ್ದು, ಹುರಿದುಂಬಿಸ್ತಾ ಇದ್ದದ್ದು ಹೀಗೆ ಪಂದ್ಯವನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದ ಪೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ
Comments