ಚಾಲೆಂಜಿಂಗ್ ಸ್ಟಾರ್ ರವರು ಹೇಗೆ ಸಿನಿಮಾ ಚೂಸ್ ಮಾಡ್ಕೊಂತಾರೆ ಗೊತ್ತಾ..?

ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ಅಭಿನಯದ 50 ನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
50 ನೇ ಚಿತ್ರ ಪೌರಾಣಿಕ ಸಿನಿಮಾ ಆಗಿರುವುದರಿಂದ ಖುಷಿಯಾಗಿದ್ದಾರೆ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ದರ್ಶನ್ ಮೊದಲ ಆದ್ಯತೆ ನೀಡುತ್ತಾರೆ ಎಂದು ತಿಳಿದು ಬಂದಿದೆ. ದರ್ಶನ್ ಕಾಲ್ ಶೀಟ್ ಪಡೆದುಕೊಳ್ಳಲು ನಿರ್ದೇಶಕರು ಕ್ಯೂನಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಕಥೆ ಮಾಡಿರುವ ನಿರ್ದೇಶಕರಿಗೆ ದರ್ಶನ್ ಡೇಟ್ಸ್ ಕೊಡುತ್ತಾರಾ ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದು, ಅಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಆದ್ಯತೆ ನೀಡುತ್ತೇನೆ.
ಅದಕ್ಕಾಗಿ ಕಮರ್ಷಿಯಲ್ ಚಿತ್ರಗಳನ್ನ ಪಕ್ಕಕ್ಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳನ್ನ ನಿರ್ಮಾಣ ಮಾಡುವವರು ತುಂಬಾ ಕಡಿಮೆ. ಇಂತಹ ಚಿತ್ರ ಮಾಡುತ್ತೀನಿ ಅಂತ ಬರುವವರೇ ಕಡಿಮೆ. ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಖಂಡಿತ ಬಿಡುವುದಿಲ್ಲ ಅಂತ ದರ್ಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments