ಜೂನಿಯರ್ ನಿಂದ ಸೀನಿಯರ್ ಆಗಲು ಹೊರಟಿದ್ದಾರೆ ಈ ನಟ

ಹೌದು, ಅವರೇ ನಟ ಜ್ಯೂನಿಯರ್ ನರಸಿಂಹರಾಜು. ಇವರು ಸಿನಿಮಾರಂಗಕ್ಕೆ ಬಂದು 40 ವರ್ಷಗಳ ನಂತರ ಇ ದೀಗ ತಮ್ಮ ಹೆಸರು ಬದಲಿಸಿಕೊಳ್ಳುವ ಯೋಚನೆ ಮಾ ಡಿ ದ್ದಾರೆ .
ಈಗ ಇವರು ತಮ್ಮ ಜ್ಯೂ. ನರಸಿಂಹರಾಜು ಹೆಸರಿನ ಬದಲು ಮೈಸೂರು ನರಸಿಂಹರಾಜು ಎಂದು ಇಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣವೆನೆಂಬುದನ್ನು ಕೂಡ ಅವರೇ ತಿಳಿಸಿದ್ದಾರೆ. ' ನಾನು ಚಿತ್ರರಂಗಕ್ಕೆ ಬಂದಾಗ ನನ್ನ ಬಿಟ್ಟು ಮತ್ತಿಬ್ಬರು ಜ್ಯೂನಿಯರ್ ಗಳು ಇದ್ದರು. ಈಗ ಬಹಳಷ್ಟು ಮಂದಿ ತಮ್ಮ ಹೆಸರಿನ ಮೊದಲು ಜ್ಯೂ. ಸೇರಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇಷ್ಟು ವಯಸ್ಸಾದರೂ ಜ್ಯೂನಿಯರ್ ಆಗಿ ಇದ್ದರೆ ಸೀನಿಯರ್ ಆಗುವುದು ಯಾವಾಗ ಎಂದು ಸ್ನೇಹಿತರು ರೇಗಿಸುತ್ತಾರಂತೆ. ಈ ಕಾರಣಕ್ಕೆ ಜ್ ಯೂ. ನರಸಿಂಹರಾಜು ಇನ್ನು ಮುಂದೆ ಮೈಸೂರು ನರಸಿಂಹರಾಜು ಆಗುತ್ತಿ ದ್ದೇನೆ' ಎಂದು ತಿಳಿಸಿದ್ದಾರೆ. ಇವರು ಪಕ್ಕಾ ಕಳ್ಳ, ಮಲ್ಲಿಗೆ ಸಂಪಿಗೆ, ಗಂಡುಗಲಿ ರಾಮ, ರಂಗನಾಯಕಿ, ತಾಯಿಯ ಮಡಿಲಲ್ಲಿ, ಜೈ ಕರ್ನಾಟಕ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
Comments