ಇಂತದ್ದೊಂದು ವಿಷ್ಯ ಡೈರೆಕ್ಟರ್ ಸೂರಿ ಬಗ್ಗೆ ಗಾಂಧಿನಗರದಲ್ಲಿ ಹರಿದಾಡ್ತಿದೆ..?

ಸೂರಿಯ ಟಗರು ಸಿನಿಮಾ ನೋಡಿ ಸಿಕ್ಕಾಪಟ್ಟೆ ಇಷ್ಟಪಟ್ಟಿರುವ ರಾಮ್ ಗೋಪಾಲ್ ವರ್ಮಾ ತನಗೊಂದು ಚಿತ್ರ ನಿರ್ದೇಶಿಸಿ ಕೊಡುವಂತೆ ಸೂರಿಗೆ ಆಫರ್ ಕೊಟ್ಟಿದ್ದಾರೆ. ಜೊತೆಗೇ ಟಗರು ಚಿತ್ರದ ನಟನೆಯ ಮೂಲಕ ಗೆದ್ದ ಮಾನ್ವಿತಾಗೂ ಒಂದು ಚಿತ್ರಕ್ಕೆ ಆಫರ್ ಕೊಟ್ಟಿದ್ದಾರೆ.
ಹಾಗಾಗಿ ಸೂರಿ ವರ್ಮಾಗಾಗಿ ಒಂದು ತೆಲುಗು ಚಿತ್ರ ನಿರ್ದೇಶಿಸೋದು ಗ್ಯಾರಂಟಿಯಾಗಿದೆ ಎಂದು ಎಲ್ಲೆಡೆ ಭಾರಿ ಸದ್ದು ಮಾಡ್ತಿದೆ. ಆದ್ರೆ ಸೂರಿ ಒಲವು ಬೇರೆಯೇ ಇದೆಯಂತೆ. ವರ್ಮಾಗಾಗಿ ಚಿತ್ರ ಡೈರೆಕ್ಟ್ ಮಾಡೋ ಆಸೆ ಸೂರಿಗೂ ಇದೆ, ಆದ್ರೆ ಅದು ತೆಲುಗಿನಲ್ಲಿ ಅಲ್ಲ. ಸೂರಿ ಸದ್ಯ ಬಾಲಿವುಡ್ ಕಡೆ ದೃಷ್ಟಿ ನೆಟ್ಟಿದ್ದಾರಂತೆ. ತನ್ನ ಮುಂದಿನ ಜಂಪ್ ತೆಲುಗಿಗಲ್ಲ, ಬಾಲಿವುಡ್‌ಗೆ ಆಗ್ಬೇಕು ಎನ್ನುವ ಬಯಕೆ ಈ ಪ್ರತಿಭಾವಂತ ನಿರ್ದೇಶಕನದ್ದು. ಹಾಗಾಗಿ ವರ್ಮಾ ಒಂದು ರಿಮೇಕ್ ಮಾಡೋಕೆ ಆಸಕ್ತಿ ತೋರಿಸಿದಾಗ ಸೂರಿ ಕಡ್ಡಿಪು ಡಿ ಚಿತ್ರ ನೋಡಿ ಎಂದಿದ್ದು ಹೌದಾದ್ರೂ ಅದರ ತೆಲುಗು ರಿಮೇಕ್ ಡೈರೆಕ್ಷನ್ ಮಾಡೋಕೆ ಒಪ್ಪಿಲ್ಲವಂತೆ. ಬದಲಿಗೆ ತಾನು ಹಿಂದಿಯಲ್ಲಿ ಒಂದು ಚಿತ್ರ ಮಾಡೋ ಬಯಕೆ ಬಿಚ್ಚಿಟ್ಟಿದ್ದಾರಂತೆ. ಹಾಗಾಗಿ ಸೂರಿ ಮುಂದಿನ ನಿಲ್ದಾಣ ಬಾಲಿವುಡ್ ಆಗಲಿದೆ ಎನ್ನುವುದು ಆಪ್ತರ ಆಶಯ.
Comments