ಕೆಸಿಸಿ ಕಪ್ ಚಾಂಪಿಯನ್ಸ್ ಆದ ಹ್ಯಾಟ್ರಿಕ್ ಹೀರೋ ತಂಡ

ಐಪಿಎಲ್ ಮ್ಯಾಚ್ ಜೊತೆಯಲ್ಲೆ ಕೆಸಿಸಿ ಮ್ಯಾಚ್ ಕೂಡ ನಡಿತು. ಸ್ಯಾಂಡಲ್ ವುಡ್ ಕಲಾವಿದರೆಲ್ಲಾ ಸೇರಿ ಆಡುತ್ತಿದ್ದ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗಿದೆ. ಪ್ರಾರಂಭದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವಣ್ಣ ಗೆಲುವಿನ ವಿಜಯ ಪತಾಕೆಯನ್ನು ಶಿವಣ್ಣ ಸ್ಟಾರ್ ಪ್ಲೇಯರ್ ಆಗಿದ್ದ 'ವಿಜಯನಗರ ಪೇಟ್ರಿಯಾಟ್ಸ್' ತಂಡ ಈ ಬಾರಿಯ ಕಪ್ ಗೆದ್ದು ವಿಜೇತರಾಗಿದ್ದು ಮೊದಲ ದಿನವೇ ಕಿಚ್ಚ ಸ್ಟಾರ್ ಪ್ಲೇಯರ್ ಆಗಿದ್ದ 'ಹೊಯ್ಸಳ ಈಗಲ್ಸ್'ನ ವಿರುದ್ಧ ಟೂರ್ನಿಯ ಮೊದಲ ಗೆಲುವನ್ನು ಸಾದಿಸಿತ್ತು ಶಿವಣ್ಣ ಮತ್ತು ತಂಡ.
ಎರಡನೇ ಮ್ಯಾಚ್ನಲ್ಲಿ ಇಂದ್ರಜಿತ್ ಲಂಕೇಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್' ಎದುರು ಗೆಲುವು ಸಾಧಿಸಿ ಫೈನಲ್ ತಲುಪಿದ್ದರು. ಫಿನಾಲೆಯಲ್ಲಿ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರ 'ಒಡೆಯರ್ ಚಾರ್ಜರ್ಸ್' ವಿರುದ್ಧ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಕನ್ನಡ ಚಲನಚಿತ್ರ ಕಪ್ ನ ಮೊದಲ ಸೀಸನ್ ಯಶಸ್ವಿಯಾಗಿದ್ದು, ಇಡೀ ಸ್ಯಾಮಡಲ್ ವುಡ್ ಗೆ ಖುಷಿತಂದಿದೆ. ಕಿಚ್ಚನ ಮೊದಲ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಟೂರ್ನಿ ಮುಗಿದ ನಂತರ ಅಲ್ಲೇ ಗೆಲುವು ಸಾಧಿಸಿದ ತಂಡಕ್ಕಾಗಿ ಅಭಿನಂದನಾ ಸಮಾರಂಭವನ್ನೂ ಕೂಡ ಆಯೋಜಿಸಲಾಗಿತ್ತು.. ಸಿನಿಮಾದ ಜೊತೆ ಜೊತೆಯಲ್ಲೆ ಕ್ರಿಕೇಟ್ ಮೂಲಕ ಅಭಿಮಾನಗಳನ್ನು ರಂಜಿಸುತ್ತಿರುವ ನಟರು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಮುಂದುವರೆಯಲಿ.
Comments