ಅರೆನಗ್ನಳಾಗಿ 'ಕಾಸ್ಟಿಂಗ್ ಕೌಚ್' ಬಗ್ಗೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ

ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಗೆ ಸಂಬಂಧ ಪಟ್ಟಂತೆ ದೊಡ್ಡ ಸಂಚಲನ ಸೃಷ್ಟಿಸುತ್ತಿರುವ ಶ್ರೀರೆಡ್ಡಿ ಕಳೆದ ವಾರ ಫೇಸ್ ಬುಕ್ ನಲ್ಲಿ ''ನಟಿಯರನ್ನ ಬಳಸಿಕೊಳ್ಳುತ್ತಿರುವ ಕೆಲವು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕರ ಹೆಸರು ಮತ್ತು ದಾಖಲೆಗಳನ್ನ ಬಿಡುಗಡೆ ಮಾಡುವುದಾಗಿ'' ಎಚ್ಚರಿಕೆ ನೀಡಿದ್ದರು.
ಶ್ರೀರೆಡ್ಡಿ ನೀಡಿರುವ ಹೇಳಿಕೆಯನ್ನ ಖಂಡಿಸಿ ತೆಲುಗು ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ಸುದ್ದಿ ಪ್ರಸಾರವಾದ ಹಿನ್ನೆಲೆ ತೆಲುಗು ಕಲಾವಿದರು ಸೇರಿ ಒಗ್ಗಟ್ಟು ಪ್ರದರ್ಶಿಸಿ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು. ದಾಖಲೆಗಳಿಲ್ಲದೇ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದರು.
''ನಮ್ಮ ಇಂಡಸ್ಟ್ರಿಯಲ್ಲಿ ನಟಿಯರಿಗೆ ಅವಕಾಶ ಬೇಕು ಅಂದ್ರೆ, ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಬೇಕು ಎಂದು ಬೇಡಿಕೆ ಇಡುತ್ತಾರೆ. ಇದು ನಿಜ. ಈ ಹೇಳಿಕೆ ನೀಡಿದ್ದಕ್ಕೆ ನನಗೆ ಬೆದರಿಕೆ ಕರೆ ಬರುತ್ತಿದೆ'' ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ''ನಿನಗೆ ಅವಕಾಶಗಳು ಬೇಕು ಅಂದ್ರೆ ನಿನ್ನ ಫೋಟೋಗಳು ಮತ್ತು ವಿಡಿಯೋಗಳನ್ನ ಕಳುಹಿಸು' ಎಂದು ಬೇಡಿಕೆ ಇಟ್ಟಿದ್ದರು ಎಂಬ ಸ್ಫೋಟಕ ಸಂಗತಿಯನ್ನ ಹೊರಹಾಕಿದ್ದರು. ಇಡೀ ಟಾಲಿವುಡ್ ಇಂಡಸ್ಟ್ರಿಯ ಆತಂಕಕ್ಕೆ ಕಾರಣವಾಗಿರುವ ನಟಿ ಶ್ರೀರೆಡ್ಡಿ ಬೀದಿಯಲ್ಲಿ ಅರೆನಗ್ನ ಪ್ರತಿಭಟನೆ ಮಾಡಿದ್ದಾರೆ.
Comments