ಇನ್ಟಾಗ್ರಾಮ್ ನಲ್ಲಿ ಅಬ್ಬರಿಸಿದ ಹೆಬ್ಬುಲಿ- ಫಾಲೋವರ್ಸ್ ಎಷ್ಟು ಗೊತ್ತಾ?

ಇತ್ತಿಚಿಗೆ ಸಾಮಾಜಿಕ ಜಾಲ ತಾಣಗಳ ಟ್ರೆಂಡ್ ಕ್ರಿಯೇಟ್ ಆಗಿದೆ ಎನ್ನಬಹುದು. ನಟ ನಟಿಯರೆಲ್ಲರೂ ಕೂಡ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಾ ನಟ ನಟಿಯರಿಗೂ ಕೂಡ ಫಾಲೋವರ್ಸ್ ಇದ್ದೆ ಇರುತ್ತಾರೆ.
ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಸದ್ಯ ಇನ್ಟಾಗ್ರಾಮ್ ನಲ್ಲಿ ಹೆಬ್ಬುಲಿಯ ಅಬ್ಬರ ಜೋರಾಗಿದೆ. ಕಿಚ್ಚ ಈಗ ಇನ್ಟಾಗ್ರಾಮ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ಟಾಗ್ರಾಮ್ ನಲ್ಲಿ 2 ಮಿಲಿಯನ್ ಗಡಿ ದಾಟಿದ ಮೊದಲ ಕನ್ನಡದ ನಟ ಸುದೀಪ್ ಎಂಬುದು ತಿಳಿದುಬಂದಿದೆ.. ಕೆಲವೇ ತಿಂಗಳುಗಳ ಹಿಂದೆ ಇನ್ಟಾಗ್ರಾಮ್ ಖಾತೆ ತೆರೆದಿದ್ದ ಸುದೀಪ್ ಕಡಿಮೆ ಸಮಯದಲ್ಲಿಯೇ ಇಷ್ಟೊಂದು ಹಿಂಬಾಲಕರನ್ನು ಹೊಂದಿದ್ದಾರೆ ಎಂದರೆ ಅವರಿಗೆ ಅಭಿಮಾನಿಗಳ ಬಳಗ ಎಷ್ಟಿರಬೇಕು ಎಂದು ನೀವೆ ಯೋಚನೆ ಮಾಡಿ. ಸುದೀಪ್ ಟ್ವಿಟ್ಟರ್ ನಷ್ಟು ಇನ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರೀಯರಾಗಿರುವುದಿಲ್ಲ. ಪ್ರತಿ ದಿನ ಇನ್ಟಾಗ್ರಾಮ್ ಅಪ್ ಡೇಟ್ ಕೂಡ ಮಾಡುವುದಿಲ್ಲ. ಉಳಿದಂತೆ ಬಿಗ್ ಬಾಸ್ ಕಾರ್ಯಕ್ರಮ, ದಿ ವಿಲನ್ ಸೇರಿದಂತೆ ತಮ್ಮ ಸಿನಿಮಾಗಳ ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ.. ಸದ್ಯ ಸುದೀಪ್ ರನ್ನು ಟ್ವಿಟ್ಟರ್ ನಲ್ಲಿ 1.97 ಮಿಲಿಯನ್ ಜನರು ಹಿಂಬಾಲಿಸುತ್ತಿದ್ದಾರೆ.
Comments