ಬಾಹುಬಲಿ ದಾಖಲೆ ಮುರಿಯುತ್ತಾ 'ಭರತ್ ಅನೇ ನೇನು'..?

07 Apr 2018 4:21 PM | Entertainment
627 Report

ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿ ಯುಸ್‌‌‌‌‌‌‌‌‌‌‌‌‌‌ನಲ್ಲಿ ಕೂಡಾ ವಿತರಕರು ಈಗಾಗಲೇ ಈ ಬಹುನಿರೀಕ್ಷಿತ ಸಿನಿಮಾ ಹಂಚಿಕೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಕೈರಾ ಅಡ್ವಾನಿ ಮಹೇಶ್‌‌ಗೆ ನಾಯಕಿಯಾಗಿ ನಟಿಸಿದ್ದಾರೆ. ಇದು ಕೈರಾ ಅಭಿನಯದ ಮೊದಲ ಸಿನಿಮಾ.

ಮಹೇಶ್ ಹಾಗೂ ಕೊರಟಾಲ ಶಿವ ಕಾಂಬಿನೇಶನ್‌‌ನಲ್ಲಿ ಮೂಡಿಬರುತ್ತಿರುವ 2 ನೇ ಸಿನಿಮಾ ಇದು. ಈ ಮುನ್ನ ' ಶ್ರೀಮಂತುಡು' ಚಿತ್ರವನ್ನು ಕೂಡಾ ಕೊರಟಾಲ ಶಿವ ಅವರೇ ನಿರ್ದೇಶಿಸಿದ್ದರು. ಯುಎಸ್‌‌ನಾದ್ಯಂತ  ಏಪ್ರಿಲ್ 19 ರಂದು ಸಿನಿಮಾದ ಸುಮಾರು 2000 ಶೋಗಳನ್ನು ಆಯೋಜಿಸಲಾಗಿದೆ ಎಂದು ವಿದೇಶಗಳಲ್ಲಿ ಬಿಡುಗಡೆಯಾಗುವ ತೆಲುಗು ಸಿನಿಮಾಗಳ ಹಂಚಿಕೆ ಹೊಣೆ ಹೊತ್ತಿರುವ ' ಗ್ರೇಟ್ ಇಂಡಿಯಾ ಫಿಲಮ್ಸ್‌‌‌' ತನ್ನ ಟ್ವಿಟರ್‌ನಲ್ಲಿ ಹೇಳಿದೆ. ಈಸ್ಟರ್ನ್‌ ಸ್ಟ್ಯಾಂಡರ್ಡ್‌‌ ಟೈಮ್ ಪ್ರಕಾರ ಎಲ್ಲಾ ಕಡೆ ಮಧ್ಯಾಹ್ನ 3 ಗಂಟೆಗೆ ಶೋ ಆರಂಭವಾಗಲಿದೆ.

ತೆಲುಗು ಸಿನಿಮಾ ಇತಿಹಾಸದಲ್ಲೇ ವಿದೇಶಗಳಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಹಂಚಿಕೆಯಾಗುತ್ತಿರುವ ಸಿನಿಮಾ ಎಂದರೆ 'ಭರತ್ ಅನೇ ನೇನು'. ಈ ಮೂಲಕ ರಾಜಮೌಳಿ ನಿರ್ದೇಶನದ ' ಬಾಹುಬಲಿ' ದಾಖಲೆಯನ್ನು ಈ ಸಿನಿಮಾ ಬ್ರೇಕ್ ಮಾಡುತ್ತಿದೆ ಎನ್ನಲಾಗಿದೆ. ಸಿನಿಮಾದಲ್ಲಿ ತಮಿಳು ನಟ ಶರತ್, ಮಹೇಶ್ ಬಾಬು ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. . ಅವರೇ ಹೇಳುವ ಪ್ರಕಾರ ಅವರ ಕೆರಿಯರ್‌ನಲ್ಲಿ ಇದು ಬಹಳ ದೊಡ್ಡ ಪ್ರಾಜೆಕ್ಟ್ ಅಂತೆ.

Edited By

Shruthi G

Reported By

Madhu shree

Comments