35 ವರ್ಷಗಳ ಬಳಿಕ ಸಿನಿಮಾ ವೀಕ್ಷಿಸುತ್ತಿದ್ದರಂತೆ ಈ ಜನ.!! ನಂಬಲಾಸಾಧ್ಯ ಆದ್ರೂ ನಿಜ

07 Apr 2018 2:43 PM | Entertainment
448 Report

ಹೌದು, 1970 ರಲ್ಲಿ ಸೌದಿ ಅರೇಬಿಯಾದಲ್ಲಿ ಥಿಯೇಟರ್‌ಗಳಲ್ಲಿ ಚಿತ್ರಗಳ ಪ್ರದರ್ಶನವಾಗುತ್ತಿದ್ದವು. ಆದರೆ, ಇಸ್ಲಾಂ ಧರ್ಮದ ಕಟ್ಟಳೆಯ ಕಾರಣವಾಗಿ ಚಿತ್ರಗಳ ಪ್ರದರ್ಶನದ ಮೇಲೆ ನಿರ್ಬಂಧ ಹೇರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಚಿತ್ರಗಳ ಪ್ರದರ್ಶನವಾಗಿರಲಿಲ್ಲ.

ಇದೀಗ ಈ ದೇಶದ ಜನರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮನೋರಂಜನೆಯ ಭಾಗವಾಗಿ ಚಿತ್ರಗಳ ಪ್ರದರ್ಶನಕ್ಕೆ ಇಲ್ಲಿಯ ಸರ್ಕಾರ ಅನುಮತಿ ನೀಡಿದೆ. ಮಾರ್ಕ್ವೆಲ್ ಚಿತ್ರ ನಿರ್ಮಾಣ ಸಂಸ್ಥೆಯು, ಯುಎಸ್‌‌ನ ಎಎಂಸಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರನ್ವಯ ಮುಂದಿನ ಐದು ವರ್ಷಗಳಲ್ಲಿ ಸೌದಿ ರಾಷ್ಟ್ರದಲ್ಲಿ 40 ಚಿತ್ರ ಮಂದಿರಗಳನ್ನು ತೆರೆಯಲಿದೆ.

ಇದೇ ತಿಂಗಳು 18 ರಂದು ಹಾಲಿವುಡ್‌ನ ಬ್ಲ್ಯಾಕ್ ಫ್ಯಾಂಥರ್ ಚಿತ್ರ ಈ ದೇಶದಲ್ಲಿ ರಿಲೀಸ್ ಆಗುತ್ತಿದೆ.  ಈ ಚಿತ್ರ ಸೌದಿಯ ರಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ 35 ವರ್ಷಗಳ ಬಳಿಕ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ ಎನ್ನುವ ದಾಖಲೆ ಮಾಡುತ್ತಿದೆ.

Edited By

Shruthi G

Reported By

Madhu shree

Comments