ಸಿನಿ ಜರ್ನಲಿಸ್ಟ್‌ಗಳಿಗೆ ಪಾರ್ಟಿ ಕೊಟ್ಟ ‘ಅಲ್ಲು ಅರ್ಜುನ್’
ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ‘ಅಲ್ಲು ಅರ್ಜುನ್’ ಎಲ್ಲರಿಗೂ ಅಚ್ಚುಮೆಚ್ಚು. ಹಾಗೇ ಇವರು ಮಾಧ್ಯಮದವರೊಂದಿಗೂ ಕೂಡ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಇದಕ್ಕೆ ಸಾಕ್ಷಿ ಅವರು ಸಿನಿ ಜರ್ನಲಿಸ್ಟ್‌ಗಳಿಗೆ ನೀಡಿರುವ ಪಾರ್ಟಿ. ಹೌದು ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರಿಂದ ಏಪ್ರಿಲ್.6 ರಂದು ಅವರು ಸಿನಿ ಜರ್ನಲಿಸ್ಟ್‌ಗಳಿಗೆ ಭರ್ಜರಿ ಪಾರ್ಟಿಯೊಂದನ್ನು ನೀಡಿದ್ದಾರೆ.
ಹೈದರಾಬಾದ್‌ನ ಜ್ಯೂಬ್ಲಿ ಹಿಲ್ಸ್‌ನ ' ಪೋಶ್ ಪಬ್'ನಲ್ಲಿಏರ್ಪಡಿಸಿದ ಈ ಪಾರ್ಟಿಯನ್ನು ಬರ್ತಡೇ ಹಿಂದಿನ ದಿನ ಅಂದರೆ, ಎಪ್ರಿಲ್ 7 ರಂದು ನೀಡಲು ಈ ಮೊದಲು ನಿರ್ಧರಿದ್ದಾರಂತೆ. ಆದರೆ ಅಂದು ಪ್ರಿನ್ಸ್ ಮಹೇಶ್ ಬಾಬು ಅಭಿನಯದ ' ಭರತ್ ಅನೇ ನೇನು' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇರುವ ಕಾರಣ 6 ರಂದು ಪಾರ್ಟಿ ನೀಡಿದ್ದಾರಂತೆ. ಒಟ್ಟಿನಲ್ಲಿ ಮಾಧ್ಯಮದವರೊಂದಿಗೆ ಇವರ ನಂಟು ಯಾವಾಗಲೂ ಹೀಗೆ ಗಟ್ಟಿಯಾಗಿರಲಿ ಎಂದು ಹಾರೈಸೋಣ.
Comments