ಟಿ10 ಕ್ರಿಕೆಟ್ : ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಸಿನಿ ತಾರೆಯರು

ಇಂದಿನಿಂದ ಆರಂಭವಾಗಲಿರುವ ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನಡೆಸಿದರು. ನೆಲಮಂಗಲದ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಪಂದ್ಯಾವಳಿಯಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್ ಕಪ್ಗಾಗಿ ಸೆಣೆಸಾಡಲಿದ್ದಾರೆ.
ಪಂದ್ಯಾವಳಿ ಉದ್ಘಾಟನೆಗೆ ನಟ ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯರಿಗೆ ವಿಶೇಷ ಆಹ್ವಾನ ನೀಡಿದ ಹಿನ್ನೆಲೆ ಸಿಎಂ ಇಂದು ಆಗಮಿಸಿ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದರು. ಉದ್ಘಾಟನಾ ಪಂದ್ಯಾವಳಿಯ ಮೊದಲ ದಿನದ ಪಂದ್ಯದಲ್ಲಿ ನಾಲ್ಕು ತಂಡಗಳು ಸೆಣಸಾಡಲಿದ್ದು, ನಾಳೆ ಮತ್ತೆರಡು ಪಂದ್ಯ ನಡೆದು ಅಂತಿಮವಾಗಿ ಎರಡು ತಂಡ ಫೈನಲ್ಗೆ ಪ್ರವೇಶ ಪಡೆಯಲಿದೆ. ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವು ನಟರ ಮೈದಾನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
Comments