ಶಿವಣ್ಣನ ನಿಜವಾದ ಹೆಸರೇನು ಗೊತ್ತಾ?
ಚಿತ್ರರಂಗಕ್ಕೆ ಬಂದ ಮೇಲೆ ಎಲ್ಲರೂ ಕೂಡ ಒಂದೊಂದು ಹೆಸರನ್ನು ಇಟ್ಟುಕೊಳ್ಳುತ್ತಾರೆ. ಕೆಲವರು ರಾಶಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸಂಖ್ಯೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಾರೆ.
ಸಿನಿಮಾ ರಂಗದಲ್ಲಿ ಇರುವವರೆಲ್ಲಾ ಫ್ಯಾಷನ್ ಗೂ ಕೂಡ ಹೆಸರನ್ನು ಬದಲಾಯಿಸಿಕೊಳ್ಳತ್ತಾರೆ. ಅದೇ ರೀತಿ ನಮ್ಮ ಹ್ಯಾಟ್ರಿಕ್ ಹೀರೋ ಕೂಡ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾನ ಗಂಧರ್ವ ಡಾ.ರಾಜ್ ಕುಮಾರ್ ಅವರ ಸುಪುತ್ರ. ಆನಂದ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಇವರು ಅಂದಿನಿಂದ ಇಂದಿನವರೆಗೂ ರಂಜಿಸುತ್ತಲೆ ಬಂದಿದ್ದಾರೆ. ಇನ್ನೂ ಹದಿಹರೆಯದಂತೆ ಇವರ ಶಿವಣ್ಣನ ನಿಜವಾದ ಹೆಸರು ಶಿವ ಪುಟ್ಟ ಸ್ವಾಮಿ. ಕೆಲವರು ನಾಗರಾಜು ಶಿವ ಪುಟ್ಟ ಸ್ವಾಮಿ ಎಂದೇಳುತ್ತಾರೆ. ಆದರೆ ನಮ್ಮ ಹ್ಯಾಟ್ರಿಕ್ ಹೀರೋ ಗುರುತಿಸಿಕೊಂಡಿದ್ದರು ಮಾತ್ರ ಶಿವರಾಜ್ ಕುಮಾರ್ ಅಂತ.. ಏನೆ ಆಗಲಿ ನಮ್ಮ ಶಿವಣ್ಣ ಹೀಗೆ ನೂರಾರು ಚಿತ್ರಗಳನ್ನು ಸಿನಿರಸಿಕರ ಪಾಲಿಗೆ ಕೊಡುತ್ತಿರಲಿ.
Comments