ರಾಮಾಚಾರಿ ಖ್ಯಾತಿಯ ಟ್ವಿನ್ಸ್ ಸಿಸ್ಟರ್ಸ್ ಗೆ ಸಿಕ್ಕಿದೆ ಹೊಸ ಸಿನಿಮಾ ಆಫರ್
ಸ್ಯಾಂಡಲ್ ವುಡ್:- ಚಿತ್ರರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳು ನೋಡುಗರನ್ನು ಆಕರ್ಷಣೆ ಮಾಡುತ್ತವೆ. ಆದರೆ ಮನಸ್ಸಿನಲ್ಲಿ ಉಳಿಯುವುದು ಕೆಲವೊಂದು ಮಾತ್ರ. ಅಕ್ಕ ತಂಗಿಯರ ಸೆಂಟಿಮೆಂಟ್ ಪಾತ್ರಗಳಂತೂ ಜನಮಾನಸದಲ್ಲಿ ಕೆಲವೊಮ್ಮೆ ಹಾಗೆ ಉಳಿದುಬಿಡುತ್ತವೆ.
ಆದರೆ ಅವಳಿ ಸಹೋದರಿಯರು ಇರುವುದು ತೀರಾ ಅಪರೂಪ. ಕನ್ನಡದಲ್ಲಿ 'ರಾಮಾಚಾರಿ'ಯ ಅವಳಿ ಸಹೋದರಿಯರು ಎಂದೆನೇ ಫೇಮಸ್ ಆಗಿರುವ ನಟಿಯರು ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ. ಸಿನಿಮಾ ಮಾಡಿದ್ದ ಇವರು ತದ ನಂತರ ಒಟ್ಟಿಗೆ ಒಂದು ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು. ಈಗ ಅದ್ವಿತಿ ಶೆಟ್ಟಿ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.ಯಶ್ ಮತ್ತು ರಾಧಿಕ ಪಂಡಿತ್ ಅವರ ಸೂಪರ್ ಹಿಟ್ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನೋಡಿದವರಿಗೆ ಇಬ್ಬರು ಅವಳಿ ಸಹೋದರಿಯರು ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಚಿಕ್ಕದಾಗಿದ್ದರೂ, ಕೂಡ ಈ ಸಹೋದರಿಯರನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.
ಇನ್ನೂ ಇವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು ಅದ್ವಿತಿ ಶೆಟ್ಟಿ ಅವರ ಮಾತೃ ಭಾಷೆ ತುಳು. ಈಗ ಅದ್ವಿತಿ ತುಳು ಭಾಷೆಯಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ತುಳು ನಟರಾದ ನವೀನ್ ಪಡೀಲ್ ಹಾಗೂ ಭೋಜರಾಜ್ ವಾಮಂಜೂರ್ ಜೊತೆಗೆ ಅದ್ವಿತಿ ಶೆಟ್ಟಿ ನಟಿಸುತ್ತಿದ್ದಾರೆ.. ಆದರೆ ಈಗ ತುಳು ಚಿತ್ರರಂಗಕ್ಕೆ ಇವರು ಎಂಟ್ರಿ ಕೊಟ್ಟಿದ್ದಾರೆ.ಮುಂದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾವ ರೀತಿ ನೆಲೆಯೂರುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
Comments