ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟಿ ಜಯಂತಿ

ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯಿಂದ ಮನೆಗೆ ಹೋಗುವ ಮುನ್ನ ಆಸ್ಪತ್ರೆ ಅವರಣದಲ್ಲಿ ನಡೆದ ಮಾಧ್ಯಮಗೋಷ್ಠೀಯನ್ನು ಉದ್ದೇಶಿಸಿ ನಟಿ ಜಯಂತಿ ಅವರು ಮಾತನಾಡಿದರು.
ಇದೇ ವೇಳೆ ಅವರು ಮಾತನಾಡಿ ನನ್ನ ಆರೋಗ್ಯ ಸುಧಾರಿಸುವಂತೆ ಪ್ರಾರ್ಥನೆ ಮಾಡಿದ ಎಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಹೇಳುವೆ ಅಂತ ಹೇಳಿದರು. ಕೆಲ ಸುದ್ದಿ ಮಾಧ್ಯಮಗಳು ತಮ್ಮ ಸಾವನ್ನು ಕೂಡ ಪ್ರಸಾರ ಮಾಡಿದ್ದರ ಬಗ್ಗೆ ಜಯಂತಿಯವರು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಅವರು ನಾನು ಸಂಪೂರ್ಣವಾಗಿ ಗುಣವಾದ ಮೇಲೆ ಮತ್ತೆ ಮಾಧ್ಯಮದವರನ್ನ ಭೇಟಿಯಾಗುತ್ತೆನೆ ಅಂತ ತಿಳಿಸಿದರು.
Comments