ಸಲ್ಮಾನ್ ಖಾನ್ ಭೇಟಿ ಮಾಡಲು ಬಂದ ಆಪ್ತ ಸ್ನೇಹಿತೆ.....?
ಸೆಷನ್ಸ್ ನ್ಯಾಯಾಲಯ ಸಲ್ಲು ಜಾಮೀನು ಅರ್ಜಿ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮತ್ತೆ ಜೈಲು ಸೇರಿದ್ದಾರೆ. ಸಲ್ಮಾನ್ ದೋಷಿ ಎಂಬ ತೀರ್ಪು ಬಾಲಿವುಡ್ ದುಃಖಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕೆಲ ಕಲಾವಿದರು ನೋವು ತೋಡಿಕೊಂಡಿದ್ದಾರೆ. ಸಲ್ಮಾನ್ ಆಪ್ತ ಸ್ನೇಹಿತೆ ಪ್ರೀತಿ ಜಿಂಟಾ ಮಾತ್ರ ನೇರವಾಗಿ ಜೋದ್ಪುರಕ್ಕೆ ಬಂದಿದ್ದಾರೆ. ಪ್ರೀತಿ ದೆಹಲಿಯಿಂದ ಜೋದ್ಪುರಕ್ಕೆ ಬಂದಿದ್ದಾರೆ. ಜೋದ್ಪುರ ವಿಮಾನ ನಿಲ್ದಾಣದಲ್ಲಿ ದೊಡ್ಡ ಹ್ಯಾಟ್ ಮೂಲಕ ಮುಖ ಮುಚ್ಚಿಕೊಳ್ಳುವ ಯತ್ನ ಮಾಡಿದ್ರು ಪ್ರೀತಿ. ಕಾರ್ ಏರುವ ವೇಳೆ ಪ್ರೀತಿ ಮುಖ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ವಿಮಾನ ನಿಲ್ದಾಣದಿಂದ ಪ್ರೀತಿ ನೇರವಾಗಿ ಜೋದ್ಪುರ ಜೈಲಿಗೆ ತೆರಳಿದ್ದಾರೆ. ಆದ್ರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೈಲಧಿಕಾರಿಗಳು ಸಲ್ಲು ಭೇಟಿಗೆ ಅವಕಾಶ ನೀಡಿದ್ರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
Comments