ಮಾಜಿ ಪ್ರಿಯಕರನ ಜೊತೆ ದೀಪಿಕಾ ಡಾನ್ಸ್
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ ವಿವಾಹ ಈ ವರ್ಷದಲ್ಲೇ ನಡೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಸಿದ್ದತೆಗಳು ನಡೆಯುತ್ತಿದ್ದು, ದೀಪಿಕಾ ಶಾಪಿಂಗ್ ಕೂಡಾ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು.
ಈ ಮಧ್ಯೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರೇಮಿ ರಣಬೀರ್ ಕಪೂರ್ ಜೊತೆ ಭಾಗವಹಿಸಿದ್ದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೊತೆ ತಾವು ಅಭಿನಯಿಸಿದ್ದ 'ಬಾಜಿರಾವ್ ಮಸ್ತಾನಿ' ಚಿತ್ರದ ಮಲ್ಹಾರಿ ಹಾಡಿಗೆ ಭರ್ಜರಿ ಸ್ಪೆಪ್ ಹಾಕುವ ಮೂಲಕ ಅಭಿಮಾನಿಗಳ ಮನರಂಜಿಸಿದ್ದಾರೆ.
ಅಷ್ಟೇ ಅಲ್ಲ 'ಚೆನ್ನೈ ಎಕ್ಸ್ ಪ್ರೆಸ್', 'ಎ ದಿಲ್ ಎ ಮುಷ್ಕಿಲ್' ಹಾಗೂ 'ಎ ಜವಾನಿ ಎ ದಿವಾನಿ' ಚಿತ್ರದ ಹಾಡಿಗೂ ದೀಪಿಕಾ, ರಣಬೀರ್ ಜೊತೆ ಹೆಜ್ಜೆ ಹಾಕಿದ್ದಾರೆ. 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಲುಂಗಿ ಹಾಡಿಗೆ ಡಾನ್ಸ್ ಮಾಡುವ ವೇಳೆ ರಣಬೀರ್ ಗೆ ದೀಪಿಕಾ ಕೆಲ ಸ್ಟೆಪ್ ಹೇಳಿಕೊಟ್ಟಿದ್ದಾರೆ. ಅಭಿಮಾನಿಗಳು ಈ ಕಾರ್ಯಕ್ರಮವನ್ನು ತುಂಬಾನೇ ಎಂಜಾಯ್ ಮಾಡಿದ್ದು, ಇವರಿಬ್ಬರ ಡಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅದೀಗ ವೈರಲ್ ಆಗಿದೆ.
Comments