ಅಂದು ಎಸ್ ಎಸ್ ಎಲ್ ಸಿ ಟಾಪರ್… ಇಂದು ಸ್ಯಾಂಡಲ್ ವುಡ್ ನ ಕಿಲ್ಲರ್…?

06 Apr 2018 12:43 PM | Entertainment
567 Report

ಸ್ಯಾಂಡಲ್ ವುಡ್:- ಈ ಬಣ್ಣದ ಜಗತ್ತು ಅಷ್ಟು ಸುಲಭವಾಗಿ ಯಾರನ್ನು ಕೈ ಬೀಸಿ ಕರೆಯುವುದಿಲ್ಲ. ಒಂದು ವೇಳೆ ಕರೆದರೂ ಕೈ ಹಿಡಿದು ನೆಲೆ ಕಂಡುಕೊಳ್ಳುವುದು ತುಂಬಾ ವಿರಳ. ನಟನಾ ಕೌಶಲ್ಯದ ಜೊತೆಗೆ ಅದೃಷ್ಟವು ಇದ್ದರೆ ಮಾತ್ರ ಈ ಚಂದನವನದಲ್ಲಿ ಇರಲು ಸಾಧ್ಯ. ಆದರೆ ಎಷ್ಟೋ ಜನರು ನಾಯಕರಾಗ ಬೇಕು ಎಂಬ ಹಂಬಲದೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ಹೀರೋ ಆಗಬೇಕು ಅಂತ ಬಂದವರು ಕೆಲವೊಮ್ಮೆ ವಿಲನ್ ಆಗಿಯೂ ನಟಿಸಬೇಕಾಗುತ್ತದೆ. ಇನ್ನೂ ಕೆಲವೊಮ್ಮೆ ಅವಕಾಶಗಳು ಸಿಗದೆ ಬಂದ ದಾರಿಗೆ ಸುಂಕ ಇಲ್ಲ ಅನ್ನೋ ತರ ಹೋಗಬೇಕಾಗುತ್ತದೆ.

ಒಂದು ಕಾಲದಲ್ಲಿ ಎಸ್ ಎಸ್ ಎಲ್ ಸಿ ಟಾಪರ್ ಆಗಿದ್ದ ಹುಡುಗ ಇಂದು ಸ್ಯಾಂಡಲ್ ವುಡ್ ನಲ್ಲಿ ಒಬ್ಬ ಒಳ್ಳೆಯ ನಟನಾಗಿ, ಅಲ್ಲ… ಅಲ್ಲ…ಬಹು ಬೇಡಿಕೆಯ ವಿಲನ್ ಆಗಿ ನಿಂತಿರುವುದು ಆಶ್ಚರ್ಯ ಅನಿಸಿದರೂ ಕೂಡ ನಿಜ. ಅಷ್ಟಕ್ಕೂ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ಯೋಚನೆ ಮಾಡುತ್ತಿದ್ದೀರಾ…? ಮುಂದೆ ಓದಿ

2013 ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ರು. ನಂತರ ರಾಟೆ ಬದ್ಮಾಶ್ ಮುಂತಾದ ಚಿತ್ರಗಳಲ್ಲಿ ನಾಯಕ ನಾಗಿಯೂ ಅಭಿನಯಿಸಿದ್ದರು. ಅವರೆ ನಮ್ಮ ಧನಂಜಯ್ . ಆದರೆ ಅವರು ನೇಮು ಫೇಮು ಗಳಿಸಿದ್ದು ಮಾತ್ರ ಟಗರು ಚಿತ್ರದ ಡಾಲಿ ಪಾತ್ರದಿಂದ.. ಹೌದು, ಟಗರು ಚಿತ್ರದಲ್ಲಿ ವಿಲನ್ ಆಗಿ ತೆರೆ ಮೇಲೆ ಸಖತ್ ಆಗಿಯೇ ಮಿಂಚಿದ್ದಾರೆ. ಆ ಚಿತ್ರವನ್ನು ನೋಡಿದ ಮೇಲೆ ಧನಂಜಯ್ ಅಂತ ಇದ್ದ ಹೆಸರಿನ ಜೊತೆಗೆ ಡಾಲಿ ಸೇರಿಕೊಂಡು ಬಿಟ್ಟಿದೆ. ಈಗ ಇವರು ಡಾಲಿ ಧನಂಜಯ್ ಅಂತಾನೇ ಫೇಮಸ್. ಟಗರು ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡ ಮೇಲೆ ಅವರು ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ವಿಲನ್ ಆಗಿದ್ದಾರೆ.ಇವರು ಎಸ್ ಎಸ್ ಎಲ್ ಸಿ ಟಾಪರ್ ಆಗಿದ್ದು ನಿಜ. ಈಗ ಬಹು ಬೇಡಿಕೆಯ ವಿಲನ್ ಆಗಿರೋದು ಕೂಡ ಅಷ್ಟೆ ನಿಜ.

 

 

Edited By

Manjula M

Reported By

Manjula M

Comments