'ಟೈಗರ್' ಬಂಧನದಿಂದ ಬಾಲಿವುಡ್ ನಿರ್ಮಾಪಕರಿಗೆ ಭೀತಿ..!!

ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಜೋಧ್ ಪುರ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಸಲ್ಮಾನ್ ಗಾಗಿ ಈಗಾಗಲೇ ಹಲವು ನಿರ್ಮಾಪಕರು 500 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದಾರೆ.
ಒಂದು ವೇಳೆ ಸಲ್ಮಾನ್ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದ್ರೆ ನಿರ್ಮಾಪಕರು ಕೋಟ್ಯಾಂತರ ರೂ. ನಷ್ಟ ಅನುಭವಿಸಲಿದ್ದಾರೆ ಅಂತಾ ಸಿನಿಮಾ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ. ಟೈಗರ್ ಜಿಂದಾ ಹೈ ಸಿನಿಮಾದ ಬಳಿಕ ಸಲ್ಮಾನ್ ರೇಸ್-3 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ರೇಸ್-3, ಭಾರತ್, ದಬಾಂಗ್-3, ವಾಂಟೆಡ್-2, ಶೇರ್‍ಖಾನ್, ಪಾರ್ಟ್ ನರ್-2, ಕಿಕ್-2, ದಸ್ ಕಾ ದಮ್ ಸಿನಿಮಾಗಳು ತೆರೆಕಾಣಬೇಕಿದೆ. ಈ ಮಧ್ಯೆ, ಸಲ್ಮಾನ್ ಖಾನ್ ಪರ ವಕೀಲರು ನಟನಿಗೆ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಸೆಂಟ್ರಲ್ ಜೈಲಿಗೆ ಕೊರೆದೊಯ್ದಿದ್ದು, ವೈದ್ಯಕೀಯ ತಾಪಸಣೆಯ ನಂತರ ಕೈದಿ ಸಂಖ್ಯೆ 106 ನೀಡಲಾಗಿದೆ. ಅಲ್ಲದೆ ಜೈಲಿನಲ್ಲಿ ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು ಇರುವ ಕೊಣೆಯನ್ನು ನೀಡಲಾಗಿದೆ.
Comments