'ಕೆಜಿಎಫ್ 'ಶೂಟಿಂಗ್ ಸೆಟ್ ನಿಂದ ರಾಧಿಕಾ... ಎತ್ತಾಕ್ಕೊಂಡು ಬರ್ತಾ ಇರೋದೇ...?



ಇದೇನಪ್ಪ ಇದು ರಾಧಿಕಾ ಪಂಡಿತ್ ನಟನೆಯ ಹಾಡಿಗೂ 'ಕೆಜಿಎಫ್' ಸಿನಿಮಾ ಶೂಟಿಂಗ್ ಸೆಟ್ ಗು ಏನು ಸಂಬಂಧ ಅಂತ ತಲೆ ಕೆಡಿಸ್ಕೊಬೇಡಿ, ಯಶ್ ಪತ್ನಿ ರಾಧಿಕಾ ಪಂಡಿತ್ ರವರು 'ಕೆಜಿಎಫ್' ಸೆಟ್ ನಿಂದ ಒಂದು ವಸ್ತುವನ್ನು ತಗೊಂಡು ಬಂದಿದ್ದಾರಂತೆ ಏನದು ಅಂತ ತಿಳಿಯಲು ಮುಂದೆ ಓದಿ...
ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ 'ಕೆಜಿಎಫ್' ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದ್ದು, ಪತಿಯ ಚಿತ್ರದ ಶೂಟಿಂಗ್ ಸೆಟ್ ಗೆ ತೆರಳಿದ್ದ ನಟಿ ರಾಧಿಕಾ ಪಂಡಿತ್ ಅವರು ಅಲ್ಲಿಂದ ವಾಪಾಸು ಬರುವಾಗ ಒಬ್ಬರೇ ಬಂದಿಲ್ಲ . ಬದಲಾಗಿ ತಮ್ಮ ಜೊತೆ ಸನ್ ಗ್ಲಾಸ್ ಒಂದನ್ನು ತೆಗೆದುಕೊಂಡು ಬಂದಿದ್ದಾರಂತೆ. ಅದನ್ನು ಅವರು ಅಂದು ಸಂಜೆ ಧರಿಸಿ ಸೆಲ್ಫಿ ತೆಗೆದುಕೊಂಡು ಆ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ 'ಲೈಫ್ ಇನ್ ಯಲ್ಲೋವ್' ಎಂದು ಬರೆದು ಈ ಗ್ಲಾಸ್‌ನ್ನು ನಿರ್ದೇಶಕ ಪ್ರಶಾಂತ್ ರಾಜ್ ಪತ್ತೆ ಹಚ್ಚುವುದಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.
Comments