ಏಳು ವರ್ಷಗಳ ಬಳಿಕ 'ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಎಗೇನ್' ಟ್ರೇಲರ್ ರಿಲೀಸ್..! ಹೀರೋ ಯಾರು ಗೊತ್ತಾ..?



'ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಎಗೇನ್' ಚಿತ್ರದ ಹೀರೋ ಬಗ್ಗೆ ಹೇಳೋದಾದ್ರೆ ಇವರು ನಟ ಹಾಗೂ ಕಾಮಿಡಿಯನ್ ಹೀಗೆ ಹೇಳಿದ್ರೆ ನಿಮಗೆ ಗೊತ್ತಾಗೊಲ್ಲ ನಿಜ. ಮಿಸ್ಟರ್ ಬೀನ್ ಅಂದ್ರೆ ಎಲ್ಲರೂ ಕೂಡ ನಮಗೆ ಗೊತ್ತಿದೆ ಎಂದು ಹೇಳ್ತೀರಾ ಅಲ್ವಾ. ಈ ಮಿಸ್ಟರ್ ಬೀನ್ ಅವರೇ ರೋವನ್ ಅಟ್ಕಿನ್ಸನ್.
ಸದ್ಯ ಇವರು ನಟಿಸಿರುವ ಹಾಲಿವುಡ್‌ನ 'ಜಾನಿ ಇಂಗ್ಲಿಷ್ ಸ್ಟ್ರೈಕ್ಸ್ ಎಗೇನ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದು 2011 ರಲ್ಲಿ ತೆರೆ ಕಂಡಿದ್ದ 'ಜಾನಿ ಇಂಗ್ಲಿಷ್ ರಿಬಾರ್ನ್' ಚಿತ್ರದ ಸಿಕ್ವೆಲ್. ಏಳು ವರ್ಷಗಳ ಬಳಿಕ ಈ ಚಿತ್ರದ ಮುಂದುವರೆದ ಭಾಗ ರೆಡಿಯಾಗಿದೆ. ಈ ಚಿತ್ರದಲ್ಲಿ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆಗೆ ನಟ ಬೆನ್ ಮಿಲ್ಲರ್ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ 12 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.
Comments