ಕೆಸಿಸಿಯಲ್ಲಿ ಬ್ಯಾಟ್ ಹಿಡಿದು ಅಭಿಮಾನಿಗಳನ್ನ ರಂಜಿಸಲಿರುವ ಹ್ಯಾಟ್ರಿಕ್ ಹೀರೊ

ಕ್ರಿಕೆಟ್ ಅಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಇಷ್ಟ ಪಡ್ತಾರೆ. ಐಪಿಎಲ್ ಕೂಡ ಶುರುವಾಗುತ್ತಿದೆ. ಅಷ್ಟೆ ಅಲ್ಲ ಐಪಿಎಲ್ ಜೊತೆಗೆ ಕೆಸಿಸಿ ಟೂರ್ನಮೆಂಟ್ ಕೂಡ ಆರಂಭವಾಗುತ್ತಿದೆ. ಏಪ್ರಿಲ್ 7 ಮತ್ತು 8 ರಂದು ಸ್ಯಾಂಡಲ್ ವುಡ್ ಸ್ಟಾರ್ ಗಳು ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿಯುತ್ತಿದ್ದಾರೆ
ಐಪಿಎಲ್ ಜೊತೆ ಜೊತೆಯಲ್ಲೆ ಕೆಸಿಸಿ ನಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ ಎನ್ನಬಹುದು, ಈಗಾಗಲೆ ನಟರು ಕ್ರಿಕೆಟ್ ಪ್ರಾಕ್ಟಿಸ್ ಅನ್ನು ಒಂದು ವಾರದ ಹಿಂದೆಯೇ ಶುರು ಮಾಡಿಕೊಂಡಿದ್ದಾರೆ.ಕಿಚ್ಚ ಸುದೀಪ್, ಶಿವಣ್ಣ, ಅಪ್ಪು , ರಕ್ಷಿತ್ ಶೆಟ್ಟಿ, ದಿಗಂತ್ ಸೇರೆದಂತೆ ಹಲವು ನಟರು ಕೆಸಿಸಿ(ಕನ್ನಡ ಚಲನಚಿತ್ರ ಕಪ್)ಆಡಲಿದ್ದಾರೆ.ಇನ್ನೊಂದೆಡೆ ಅದೇ ದಿನ ಐಪಿಎಲ್ 11ನೇ ಆವೃತ್ತಿ ಕೂಡ ಆರಂಭವಾಗುತ್ತಿದ್ದು, 'ಬೆಂಗಳೂರು ರಾಯಲ್ ಚಾಲೆಂಜರ್ಸ್' ತಂಡಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರಾಯಭಾರಿ ಆಗಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿದ್ದಂತಹ ಶಿವಣ್ಣ ಈಗ ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಎಂಟರ್ ಟೈನ್ ಮಾಡಲಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಕೆಸಿಸಿ ಉದ್ಘಾಟನೆ ನಡೆಯಲಿದೆ.
Comments