ಡಿ-ಬಾಸ್ ಚಿತ್ರವನ್ನು ರಿಜೆಕ್ಟ್ ಮಾಡಿದ ನಟಿ ಯಾರು ಗೊತ್ತಾ?

ಸ್ಯಾಂಡಲ್ ವುಡ್ :-ಚಾಲೆಂಜಿಂಗ್ ಸ್ಟಾರ್ ಜೊತೆ ಅಭಿನಯ ಮಾಡಲು ಸಾಕಷ್ಟು ನಟಿಯರ ಆಸೆಯಾಗಿರುತ್ತದೆ. ಏಕೆಂದರೆ ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ್ದಾರೆ ನಟ ದರ್ಶನ್. ಅದರಲ್ಲು ಇತ್ತಿಚಿಗೆ ಬಣ್ಣದ ಲೋಕಕ್ಕೆ ಕಾಲಿಡಲು ಬಯಸುವ ನಟಿಯರಿಗಂತು ಡಿ-ಬಾಸ್ ಜೊತೆ ಸ್ಕ್ರೀನ್ ಸೇರ್ ಮಾಡಿಕೊಳ್ಳುವ ಅವಕಾಶ ಸಿಕ್ಕಿದರೆ ಸಾಕು ಅಂತಿರುತ್ತಾರೆ.ಅಂತಹ ಛಾನ್ಸ್ ಸಿಗುವುದು ಕೆಲವು ನಟಿಯರಿಗೆ ಮಾತ್ರ.ಆದರೆ ಈ ಸ್ಟಾರ್ ನಟಿ ತಾನಾಗಿಯೇ ಬಂದ ಅವಕಾಶವನ್ನು ಕೈ ಬಿಟ್ಟಿದ್ದಾರೆ. ಯಾರು ಆಸ್ಟಾರ್ ನಟಿ ಅಂತಿರಾ?ಮುಂದೆ ಓದಿ.
ಈ ಸ್ಟಾರ್ ನಟಿ ಬೇರೆ ಯಾರು ಅಲ್ಲ. ಗೂಗ್ಲಿ ಚಿತ್ರದ ಚೆಲುವೆ ಕೃತಿ ಕರಬಂದ. ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿಕೊಂಡಿರುವ ಕೃತಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ ಅಷ್ಟೇ. ಈಕೆಗೆ ಯಜಮಾನ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತ್ತು.ಸಿನಿಮಾ ಸಿಕ್ಕಿದ್ದು ಖುಷಿಯಾದರೂ ಬೇಸರದಿಂದಲೇ ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಬಾಲಿವುಡ್ ಸಿನಿಮಾವಂತೆ.
ಗೂಗ್ಲಿ ಚೆಲುವೆಗೆ ದರ್ಶನ್ ಸಿನಿಮಾ ಆಫರ್ ಬಂದಾಗ, ಹಿಂದಿಯ 'ಯಮ್ಲ ಪಗಲ ದೀವಾನಾ; ಪಿರ್ ಸೇ' ಚಿತ್ರವನ್ನ ಒಪ್ಪಿಕೊಂಡಿದ್ದರು ಶೂಟಿಂಗ್ ಕೂಡ ಆರಂಭವಾಗಿತ್ತು. ಡೇಟ್ ಸಮಸ್ಯೆಯಿಂದ ಯಜಮಾನ ಚಿತ್ರವನ್ನು ಕೈಬಿಟ್ಟಿದ್ದಾರೆ. ಅಲ್ಲಿ ಸಹಿ ಮಾಡಿರುವುದರಿಂದ ಚಿತ್ರಕ್ಕೆ ತೊಂದರೆಯಾಗಬಾರದೆಂದು ಈ ಸಿನಿಮಾ ಬಿಡಬೇಕಾಯಿತು. ಇದು ಸ್ವತಃ ಕೃತಿಗೆ ಕೂಡ ಬೇಸರ ಉಂಟು ಮಾಡಿದೆಯಂತೆ.
ಕೃತಿ ಕರಬಂದ ಮಿಸ್ ಮಾಡಿಕೊಂಡ ಜಾಗಕ್ಕೆ ತೆಲುಗಿನ ತಾನ್ಯ ಹೋಪ್ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಇನ್ನೊಬ್ಬ ನಾಯಕಿಯಾಗಿ ಸೇರಿಕೊಂಡಿದ್ದಾರೆ. ಈಗಾಗಲೇ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಲ್ಲದೆ ಇವರಿಬ್ಬರು ಕೂಡ ದರ್ಶನ್ ಜೊತೆ ಚೊಚ್ಚಲ ಬಾರಿಗೆ ಅಭಿನಯಿಸುತ್ತಿದ್ದಾರೆ.
ಮತ್ತೆ ಅವಕಾಶ ಸಿಕ್ಕರೇ ಮಿಸ್ ಮಾಡಿಕೊಳ್ಳಲ್ಲ ಎಂದು ಕೃತಿ ಬೇಸರದಿಂದಲೇ ಹೇಳಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಮಾಸ್ತಿಗುಡಿ' ಚಿತ್ರದ ನಂತರ ಕೃತಿ ಅಭಿನಯದ ಸಿನಿಮಾ ಬಿಡುಗಡೆಯಾಗಿಲ್ಲ. 'ಯಜಮಾನ' ಚಿತ್ರವನ್ನ ಒಪ್ಪಿಕೊಂಡಿದ್ದರೇ ಸ್ಯಾಂಡಲ್ ವುಡ್ ನಲ್ಲಿ ಕೃತಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿತ್ತು. ಆದರೆ ಬಿಟೌನ್ ಕಮಿಟ್ ಮೆಂಟ್ ನಿಂದಾಗಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದಾರೆ. ಆದ್ರೆ, ಮುಂದೆ ದರ್ಶನ್ ಸಿನಿಮಾ ಅವಕಾಶ ಸಿಕ್ಕರೇ ಖಂಡಿತಾ ಮಿಸ್ ಮಾಡಿಕೊಳ್ಳಲ್ಲವಂತೆ ಈ ನಟಿ.ಏನೇ ದರ್ಶನ್ ಅಭಿಮಾನವನ್ನು ಈ ಚಿತ್ರವನ್ನು ತೆರೆಮೇಲೆ ನೋಡಲು ಇನ್ನೂ ಸ್ವಲ್ಪ ದಿನ ಕಾಯಲೇಬೇಕು
Comments