ಕಿರಿಕ್ ಪಾರ್ಟಿ ಬೆಡಗಿ ಈಗ ಬರ್ತ್ ಡೇ ಪಾರ್ಟಿನಲ್ಲಿ ಬ್ಯುಸಿಯಾಗಿದ್ದಾರೆ ...!!

ಕನ್ನಡ ಚಿತ್ರರಂಗಕ್ಕೆ 'ಕಿರಿಕ್ ಪಾರ್ಟಿ'ಎಂದೇ ಗುರುತಿಸಿಕೊಂಡು, ಸೈಲೆಂಟಾಗಿ ಪಡ್ಡೆ ಹೈಕಳಿಗೆ ಬೆಳಗೆದ್ದು ಯಾರ ಮುಖವ ನೋಡಿದೆ ಎಂಬ ಗುಂಗು ತಂದ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬದ ಆಚರಣೆ ಶುರುವಾಗಿದ್ದು ಕಿರಿಕ್ ಪಾರ್ಟಿ ಚಿತ್ರತಂಡದವರೆಲ್ಲರೂ ಸೇರಿ ರಶ್ಮಿಕಾ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ.
ಸದ್ಯ ರಶ್ಮಿಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಶ್ಮಿಕಾ ಟಾಲಿವುಡ್ ನಲ್ಲಿಯೂ ಗುರುತಿಸಿಕೊಂಡಿದ್ದು ಚಿರಂಜೀವಿ ಚಿತ್ರದಲ್ಲಿಯೂ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಶ್ಮಿಕಾ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಯಾವ ರೀತಿಯ ಉಡುಗೊರೆ ನೀಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದ್ದು ಹುಟ್ಟುಹಬ್ಬದ ಸ್ಪೆಷಲ್ ಹಾಗೂ ವಿಶೇಷ ಉಡುಗೊರೆ ಬಗ್ಗೆ ಸಂಜೆ ವೇಳೆಗೆ ತಿಳಿಯಲಿದೆ.
Comments