ರವಿಮಾಮನ ಈ ಸಿನಿಮಾ ಡೈಲಾಗ್ ನಿಂದ ಸೃಷ್ಟಿಯಾಯಿತು ಹೊಸ ವಿವಾದ…!

ಬಣ್ಣದ ಲೋಕದಲ್ಲಿ ನಿಜ ಸುದ್ದಿಗಳಿಗಿಂತ ಗಾಸಿಪ್ ಗಳೆ ಹೆಚ್ಚು.. ಕೆಲವು ನಟ ನಟಿಯರಂತೂ ಗಾಸಿಪ್ ಗಳಿಂದನೇ ತುಂಬಾ ಫೇಮಸ್ ಆಗಿಬಿಟ್ಟಿರುತ್ತಾರೆ.ಆದರೆ ಯಾವುದೇ ಗಾಸಿಪ್ ಗಳಿಲ್ಲದೆ ಚಂದನವನದಲ್ಲಿ ಉಳಿದುಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಈ ರೀತಿಯಾಗಿ ಯಾವುದೇ ವಿವಾದಗಳನ್ನು ಅಂಟಿಸಿಕೊಳ್ಳದೆ ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಇದ್ದ ನಟರ ಪೈಕಿ ವಿ. ರವಿಚಂದ್ರನ್ ಕೂಡ ಒಬ್ಬರು. ಒಳ್ಳೆಯ ನಟ ಹಾಗೂ ನಿರ್ದೇಶಕರಾಗಿದ್ದ ಇವರ ಡೈಲಾಗ್ ಗೆ ಹೊಸ ವಿವಾದ ಸೃಷ್ಟಿಕೊಂಡಿದೆ. ರವಿಚಂದ್ರನ್ ಹಾಗೂ ಚಿರಂಜೀವ ಸರ್ಜಾ ಅಭಿನಯದ ಹೊಸ ಚಿತ್ರ ಸೀಜರ್ ನಲ್ಲಿ ರವಿಮಾಮ ಹೇಳಿರುವ ಡೈಲಾಗ್ ಕೇಳಿರುವ ಮುಸ್ಲಿಂಮರು ಚಿತ್ರತಂಡದ ವಿರುದ್ದ ಕೋಪಗೊಂಡಿದ್ದಾರೆ.
ಸೀಜರ್ ಸಿನಿಮಾದ ಟ್ರೇಲರ್ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಟ್ರೇಲರ್ ನಲ್ಲಿ ರವಿಚಂದ್ರನ್ "ಹಸುವಿನ ಕುತ್ತಿಗೆ ಕಡಿಯುವುದು ಒಂದೇ, ತಾಯಿಯ ತಲೆ ಹಿಡಿಯುವುದು ಒಂದೇ" ಎನ್ನುವ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಮುಸ್ಲಿಂರ ಕೋಪಕ್ಕೆ ಕಾರಣವಾಗಿದೆ.
ಟ್ರೇಲರ್ ನಲ್ಲಿ ಸಂಭಾಷಣೆ ನೋಡಿರುವ ಮುಸ್ಲಿಂ ಸಂಘಟನೆಯಾದ Sdpi ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಮಜೀರ್ ಅವರು ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಮನವಿಯನ್ನು ಮಾಡಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ಬಳಸಿರುವ ಸಂಭಾಷಣೆ ಮುಸ್ಲಿಂ ಸಮುದಾಯಕ್ಕೆ ನೋವು ಉಂಟು ಮಾಡಿದೆ. ಆದ್ದರಿಂದ ದಯಮಾಡಿ ಆ ಡೈಲಾಗ್ ತೆಗೆದು ಹಾಕಿ ಎಂದು ಕೇಳಿಕೊಳ್ಳಲಿದ್ದಾರೆ.
ಸೀಜರ್ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಗೂ ರವಿಚಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು ಪಾರೂಲ್ ಯಾದವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ಯಾವ ರೀತಿಯಾಗಿ ತೆರೆ ಮೇಲೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments