ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗೆ ನೀಡಿದ ಆಟೋಗ್ರಾಫ್ ನಲ್ಲಿ ಏನಿತ್ತು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ಸಾಕು ಫ್ಯಾಮಿಲಿ ಜೊತೆ ನೋಡಬಹುದು ಅನ್ನೋದು ಬಹುಜನರ ಅಭಿಪ್ರಾಯ. ಅಷ್ಟು ಎತ್ತರದ ನಟ ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬರಿಲ್ಲ ಅನ್ನಬಹುದು. ದರ್ಶನ್ ಪದೇ ಪದೇ ಸುದ್ದಿಯಾಗ್ತಿರ್ತಾರೆ. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದರ್ಶನ್ ಸುದ್ದಿಯಾಗಿರುವುದು ಯಾವ ವಿಷಯಕ್ಕೆ ಗೊತ್ತಾ? ಮುಂದೆ ಓದಿ
ಅಭಿಮಾನಿಗಳ ತಮ್ಮ ನೆಚ್ಚಿನ ನಟರ ಬಳಿ ಆಟೋಗ್ರಾಫ್ ಹಾಕಿಸಿಕೊಳ್ಳುವುದು ಕಾಮನ್.. ಕೈ ಮೇಲೆ ಬುಕ್ ಮೇಲೆ ಈ ರೀತಿಯಾಗಿ ಅವರ ಮೇಲಿನ ಅಭಿಮಾನವನ್ನು ತೋರಿಸಿಕೊಳ್ಳುತ್ತಾರೆ. ದರ್ಶನ್ ಅವರು ಯಜಮಾನ ಚಿತ್ರದ ಶೂಟಿಂಗ್ ವೇಳೆಯಲ್ಲಿ ಅಭಿಮಾನಿಯ ದರ್ಶನ್ ಅವರನ್ನು ಮಾತನಾಡಿಸಿದ್ದಾನೆ. ದರ್ಶನ್ ಅವರು ಯಾವಾಗಲೂ ಅಭಿಮಾನಿಗಳ ವಿಷಯಕ್ಕೆ ಸ್ಪಂದಿಸುತ್ತಿರುತ್ತಾರೆ ಅನ್ನೋದು ಗೊತ್ತಿರುವ ವಿಷಯವೇ.
ಅದೇ ರೀತಿ ಆ ಅಭಿಮಾನಿ ಜೀಪಿನ ಮೇಲೆ ಆಟೋಗ್ರಾಫ್ ಅನ್ನು ಹಾಕಿಸಿಕೊಂಡಿದ್ದಾನೆ. ಅಭಿಮಾನಿಯ ಒತ್ತಾಯದ ಮೇರೆಗೆ ಆಟೋಗ್ರಾಫ್ ಹಾಕಿದ ದರ್ಶನ್ ಜೀಪಿನ ಮೇಲೆ ಡ್ರೈವ್ ಸೇಫ್ ಎಂಬ ವಿಶೇಷವಾದ ಸಂದೇಶವನ್ನು ಬರೆದಿದ್ದಾರೆ. ಅದರ ಜೊತೆಗೆ ವಾಹನ ಚಲಾವಣೆಯ ವೇಳೆ ಗಮನವಿರಲಿ ಎಂದು ಅಭಿಮಾನಿಗೆ ಬುದ್ದಿವಾದ ಕೂಡ ಹೇಳಿದ್ದಾರೆ. ಸಾಮಾನ್ಯವಾಗಿ ನಟರು ಅಭಿಮಾನಿಗಳಿಗೆ ಶುಭವಾಗಲಿ, ಆಲ್ ದಿ ಬೆಸ್ಟ್ ,ಒಳ್ಳೆಯದಾಗಲಿ ಎಂದು ಆಟೋಗ್ರಾಫ್ ಹಾಕುತ್ತಾರೆ. ಆದರೆ ಡ್ರೈವ್ ಸೇಪ್ ಅಂತ ಆಟೋಗ್ರಾಫ್ ಹಾಕಿ ಮತ್ತೊಮ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ದರ್ಶನ್ ಅವರ ಯಜಮಾನ ಚಿತ್ರ ಇನ್ನೆನೂ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರವನ್ನು ನೋಡಲು ಅಭಿಮಾನಿಗಳು ಇನ್ನು ಸ್ವಲ್ಪ ದಿನ ಕಾಯಲೇಬೇಕು
Comments