ಪಬ್ಲಿಸಿಟಿ ಗಿಮಿಕ್ ಅನ್ನೋ ಆರೋಪಕ್ಕೆ ತಕ್ಕ ಉತ್ತರ ಕೊಟ್ಟ ಅಕ್ಷಯ್ ಕುಮಾರ್

'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದ ಮೂಲಕ ನಟ ಅಕ್ಷಯ್ ಕುಮಾರ್ ಬಹಿರ್ದೆಸೆಯ ಕರಾಳ ಮುಖವನ್ನು ತೆರೆ ಮೇಲೆ ಬಿಚ್ಚಿಟ್ಟಿದ್ದರು. ಬಹಿರ್ದೆಸೆ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಈ ಸಿನೆಮಾವನ್ನು ಬಳಸಿದ್ದರು.
ಆದ್ರೆ ಇದೆಲ್ಲ ಸಿನೆಮಾದ ಯಶಸ್ಸಿಗಾಗಿ ಮಾಡ್ತಿರೋ ಪಬ್ಲಿಸಿಟಿ ಗಿಮಿಕ್ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೆ ಈ ಆರೋಪ ಸುಳ್ಳು ಅನ್ನೋದನ್ನು ಅಕ್ಷಯ್ ಕುಮಾರ್ ಸಾಬೀತುಪಡಿಸಿದ್ದಾರೆ. ನಿಜವಾದ ಪರಿಸರ ಕಾಳಜಿ ತಮಗಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಜುಹು ಬೀಚ್ ನಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅಕ್ಷಯ್ 10 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಈ ಯೋಜನೆಗಾಗಿ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಜೊತೆಗೆ ಅಕ್ಕಿ ಕೈಜೋಡಿಸಿದ್ದಾರೆ. ಅಕ್ಷಯ್ ಕೊಟ್ಟ ಹಣದಿಂದ ಜುಹು ಬೀಚ್ ಪ್ರದೇಶದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
Comments