ಭಂಡಾರಿ ಬ್ರದರ್ಸ್ ಗೆ ಕ್ಲಾಸ್ ತೆಗೆದುಕೊಂಡ ಪ್ರಥಮ್
ರಾಜರಥ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಮುಖ್ಯ ಕಾರಣ ಅಪ್ಪು ಬಾಸ್ ವಾಯ್ಸ್. . ಮಿಸ್ಟರ್ ಅನೂಪ್ ಬಂಡಾರಿ ನಿಮ್ಮ ಮೊದಲ ಸಿನಿಮಾ ಗೆಲ್ಲೋಕೆ ಮುಖ್ಯ ಕಾರಣ ಏನ್ ಗೊತ್ತಾ? ಬಾಹುಬಲಿ ಎದುರು ನಮ್ಮ ಸಿನಿಮಾ ಗೆಲ್ಲಿಸಿಕೊಳ್ಳೋಣ ಎಂಬ ಕನ್ನಡಿಗರ ವಿಶಾಲ ಮನಸ್ಸು, ಧೃಡ ನಿಲುವು'.
'ನೀವು ಹೇಳಿದ್ದು tongue slip ಅನ್ನೋದಾದರೆ ಅದನ್ನ ಪುನರುಚ್ಛರಿಸಿದ ಜಗನ್ಮಾತೆ ಅವಂತಿಕಾ ಶೆಟ್ಟಿ ನೀವಾದ್ರೂ ತಿದ್ದಬಹುದಿತ್ತು. ಅಮ್ಮಣ್ಣಿ ಅದನ್ನೇ ಪುನರುಚ್ಛರಿಸಿದ್ರಿ. ದೊಡ್ಡ ಮನುಷ್ಯ ನಿರೂಪ್ ಬಂಡಾರಿ ನಿಮದಂತೂ ಶುದ್ಧ ಉದ್ಧಟತನ.
'#ಕಚಡಾ_ಲೋಫರ್_ನನ್_ಮಕ್ಳಾ' ನಿಮ್ಮ ಸಿನಿಮಾ ನೋಡದಿದ್ರೆ?' 'ಆಸ್ಕರ್ ಕೊಡಬೇಕು ಗುರು ನಿಮಗೆ. ಇದು ಖಂಡಿತಾ tongue slip ಅಲ್ಲ. ಉದ್ದೇಶ ಪೂರಿತವಾದದ್ದೇ ಅಂತ ಸ್ಪಷ್ಟವಾಗಿ ಅನಿಸುತ್ತೆ.ನಿಜವಾಗಿಯೂ ನನಗೆ ರಂಗಿತರಂಗ ಗಿಂತ ಈ ಸಿನಿಮಾ ಕಾಮಿಡಿ ಇಷ್ಟ ಆಯ್ತು. ಎರಡನೇ ಸಲ ನೋಡೋಣ ಅಂಕೊಂಡಿದ್ದೆ. ಬಹಳ ಬೇಸರ ಆಯ್ತು. ಜನಗಳನ್ನ ಪ್ರೀತಿಯಿಂದ ಅಭಿಮಾನದಿಂದ ಗೆಲ್ಲಿ.ಈ ರೀತಿ ಕ್ಷುಲ್ಲಕ ಮಾತಿನಿಂದ ನೋಯಿಸಬೇಡಿ ' ಎಂದು ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ'. ಕೇವಲ ಪ್ರಥಮ್ ಮಾತ್ರವಲ್ಲ, ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಪ್ರೇಕ್ಷಕರು ಬಂಡಾರಿ ಬ್ರದರ್ಸ್ ವಿರುದ್ದ ಕೋಪಗೊಂಡಿದ್ದಾರೆ. ಮಾಡಿರುವ ಒಂದು ಚಿತ್ರಕ್ಕೆ ಇಷ್ಟೆಲ್ಲಾ ಮಾತನಾಡುವುದು ತಪ್ಪು ಎಂದಿದ್ದಾರೆ.
Comments