ಮೊದಲ ದಿನವೇ ಭರ್ಜರಿ ಕಲೆಕ್ಷನ್ ನತ್ತ ಹೊರಟ 'ರಂಗಸ್ಥಲಂ' ಚಿತ್ರ

ಆಂಧ್ರ, ತೆಲಂಗಾಣದಲ್ಲಿ ಚಿತ್ರ ಒಳ್ಳೆಯ ಹಣ ಗಳಿಸುತ್ತಿದ್ದು ಇದಕ್ಕೆ ಕಾರಣ ಅಲ್ಲಿ ರಾಮ್‌ಚರಣ್ ತೇಜ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದರು. ಆದರೆ ತಮಿಳುನಾಡಿನಲ್ಲಿ ಇತರ ಭಾಷೆ ಸಿನಿಮಾಗಳಿಗೆ ಅಷ್ಟು ಪ್ರತಿಕ್ರಿಯೆ ಇರುವುದಿಲ್ಲವಾದರೂ ಕೂಡ 'ರಂಗಸ್ಥಲಂ' ಚಿತ್ರ ಒಳ್ಳೆಯ ಹಣ ಗಳಿಸುವವುದರ ಮೂಲಕ ಚೆನ್ನೈನಲ್ಲಿ ಮೊದಲ ದಿನವೇ ಭಾರಿ ಮೊತ್ತದ ಹಣ ಗಳಿಸಿದ ಮೊದಲ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೂಡಾ ಹೆಚ್ಚಿನ ಲಾಭ ಗಳಿಸುತ್ತಿದೆ. ಹಾಗೇ ಪವನ್ ಕಲ್ಯಾಣ್ ಅಭಿನಯದ 'ಅಜ್ಞಾತವಾಸಿ' ಸಿನಿಮಾ ಒಂದು ದಿನದಲ್ಲಿ 24 ಲಕ್ಷ ರೂ. ಹಣ ಗಳಿಸಿತ್ತು. ಆದರೆ ಇದೀಗ ರಾಮ್ ಚರಣ್ ತೇಜ್ ಅಭಿನಯಿಸಿದ್ದ 'ರಂಗಸ್ಥಲಂ' ಚಿತ್ರ ಒಂದು ದಿನದಲ್ಲಿ 25 ಲಕ್ಷ ರೂ. ಹಣ ಗಳಿಸಿ ಪವನ್ ಕಲ್ಯಾಣ್ ಸಿನಿಮಾ ದಾಖಲೆಯನ್ನು ಕೂಡ ಮುರಿದಿದೆ.
Comments