ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ರವಿಮಾಮ
ಈ ವರ್ಷದ ಅಂತ್ಯಕ್ಕೆ ಕ್ರೇಜಿ ಸ್ಟಾರ್ ಅಭಿನಯದ ಐದು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲು ತಯಾರಾಗಿವೆ. ರವಿಚಂದ್ರನ್ ಸಿನಿಮಾನೇ ಮಾಡಿಲ್ಲ ಅಂತ ಯೋಚನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಈ ಮೂಲಕ ಸಂತಸ ಸಿಗಲಿದೆ.
ಈಗಾಗಲೇ ಚಿತ್ರೀಕರಣ ಮಾಡಿ ಮುಗಿಸಿರುವ ರವಿಚಂದ್ರನ್ ಅವರ ಎರಡು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ. ನವನೀತ್ ನಿರ್ದೇಶನದ ಬಕಾಸುರ ಸಿನಿಮಾದಲ್ಲಿ ರವಿಚಂದ್ರನ್ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವ ನಿರ್ದೇಶಕ ವಿನಯ್ ಕೃಷ್ಣ ನಿರ್ದೇಶನದ ಸೀಜರ್ ಚಿತ್ರದಲ್ಲಿಯೂ ಕ್ರೇಜಿಸ್ಟಾರ್ ಆಕ್ಟ್ ಮಾಡಿದ್ದು ಎರಡು ಸಿನಿಮಾಗಳ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ದವಾಗಿದೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಕುರುಕ್ಷೇತ್ರ' ಹಾಗೂ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಕೂಡ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಇವುಗಳ ಜೊತೆಯಲ್ಲಿ 'ದಶರಥ' ಸಿನಿಮಾ ಕೂಡ ವರ್ಷದ ಅಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಾರೆ ಈ ವರ್ಷ ಕ್ರೇಜಿಸ್ಟಾರ್ ಅಭಿಮಾನಿಗಳಿಗಂತು ಬ್ಯಾಕ್ ಟು ಬ್ಯಾಕ್ ಸಿನಿಮಾ ನೋಡಿ ಎಂಜಾಯ್ ಮಾಡುವ ಚಾನ್ಸ್ ಹೆಚ್ಚಾಗಿದೆ.
Comments