ತೆಲುಗು ನಾಡಲ್ಲೂ ಶಿವಣ್ಣನ ಟಗರಿನ ಸೊಗಡು
ತೆಲುಗಿನಲ್ಲಿ ಎನ್.ಟಿ.ಆರ್ ಎಂಬ ಹೆಸರು ಕೇಳಿದ್ರೆ ಹೇಗೆ ಅಭಿಮಾನಿಗಳು ಖುಷಿಯಾಗ್ತರೋ ಅದೇ ರೀತಿ ಕನ್ನಡದಲ್ಲಿ ಡಾ ರಾಜ್ ಕುಮಾರ್ ಅಂದ್ರೆ ಒಂದು ರೀತಿ ಶಕ್ತಿ ಅಭಿಮಾನಿಗಳಿಗೆ ಸಿಗುತ್ತೆ ಎಂದು ಅಣ್ಣಾವ್ರನ್ನ ನೆನಪಿಸಿಕೊಂಡರು. ಈ ಮಧ್ಯೆ ಶಿವಣ್ಣ ಅಭಿನಯದ 'ಟಗರು' ಚಿತ್ರದ ಟೀಸರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರನ್ನ ಶಿವಣ್ಣ ರಂಜಿಸಿದರು.
'ಟಗರು' ಚಿತ್ರದ ಟೈಟಲ್ ಹಾಡಿಗೆ ಸೆಂಚುರಿ ಸ್ಟಾರ್ ಜಬರ್ ದಸ್ತ್ ಸ್ಟೆಪ್ಸ್ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಶಿವರಾಜ್ ಕುಮಾರ್ ಅವರನ್ನ ತೆಲುಗು ನಟ ಹಾಗೂ ಶಾಸಕ ಬಾಲಕೃಷ್ಣ ಅವರು ವೇದಿಕೆಯಲ್ಲಿ ಗೌರವಿಸಿದ್ದಾರೆ. ತದ ನಂತರ ಮಾತನಾಡಿದ ಬಾಲಕೃಷ್ಣ, ಶಿವಣ್ಣ ಮತ್ತು ಡಾ ರಾಜ್ ಕುಟುಂಬದ ಜೊತೆ ತಮ್ಮ ಸಂಬಂಧದ ಬಗ್ಗೆ ಸಂತಸ ಹಂಚಿಕೊಂಡರು.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹ್ಯಾಟ್ರಿಕ್ ಹೀರೋ ಅವರ ಎನರ್ಜಿ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಶಿವಣ್ಣ ಅವರ ಡ್ಯಾನ್ಸ್ ನೋಡಿ ಆಂಧ್ರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದಕ್ಕೂ ಮುಂಚೆ 2016ರಲ್ಲಿ ಲೆಪಾಕ್ಷಿ ಉತ್ಸವ ನಡೆದಾಗ ಕನ್ನಡ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಈಗ ಮತ್ತೊಮ್ಮೆ ತೆಲುಗುನಾಡಿನಲ್ಲಿ ವೇದಿಕೆ ಹಂಚಿಕೊಳ್ಳಳುವುದರ ಮೂಲಕ ಈ ಕಾರ್ಯಕ್ರಮದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದಾರೆ.
Comments