ದಶಕದ ಬಳಿಕ ಗೋಲ್ಡನ್ ಸ್ಟಾರ್ ಗೆ ಕೋರ್ಟ್ ನಲ್ಲಿ ಸಿಕ್ತು ನ್ಯಾಯ

ಗೋಲ್ಡನ್ ಸ್ಟಾರ್ ಗಣೇಶ್ ನಮ್ಮೆಲ್ಲರಿಗೂ ಕೂಡ ಚಿರ ಪರಿಚಿತ.. ಚೆಲ್ಲಾಟದಿಂದ ಹಿಡಿದು ಚಮಕ್ ವರೆಗೂ ಒಳ್ಳೆಯ ಚಿತ್ರಗಳನ್ನ ಕೊಟ್ಟ ಗಣೇಶ್ ಹುಡುಗಿರ ಹಾಟ್ ಪೇವರೆಟ್ ಕೂಡ.
ಗಣೇಶ್ ಈಗ ಮತ್ತೆ ಸುದ್ದಿಯಾಗಿರುವುದು ಸಿನಿಮಾದಿಂದ ಅಲ್ಲ. ಬದಲಿಗೆ ಮೋಕ್ಷ ಅಗರಬತ್ತಿಯಿಂದ.ಹೌದು ಸುಮಾರು ಹತ್ತು ವರ್ಷಗಳ ಹಿಂದಿನ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಮೋಕ್ಷ ಅಗರಬತ್ತಿ ನಡುವಿನ ವಿವಾದ ಈಗ ಮುಕ್ತಾಯವಾಗಿದೆ. ಚೆಲುವಿನ ಚಿತ್ತಾರ ಸಿನಿಮಾದ ಸಮಯದಲ್ಲಿ ಒಪ್ಪಿಕೊಂಡಿದ್ದ ಮೋಕ್ಷ ಅಗರಬತ್ತಿ ಕಂಪನಿ ಜಾಹೀರಾತು ಒಪ್ಪಂದವನ್ನು ಮಾಡಿಕೊಳ್ಳಲಾಗಿತು. ಸಿನಿಮಾ ಪ್ರಚಾರಕ್ಕಾಗಿ ಮೂರು ತಿಂಗಳ ಜಾಹೀರಾತು ಒಪ್ಪಂದವನ್ನು ಮಾಡಿಕೊಂಡಿದ್ದ ಮೋಕ್ಷ ಅಗರಬತ್ತಿಯವರು ಮೂರು ತಿಂಗಳ ಒಪ್ಪಂದದ ಬಳಿಕವೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಭಾವಚಿತ್ರವನ್ನು ಬಳಸಿಕೊಂಡಿದ್ದರು. ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಗೋಲ್ಡನ್ ಸ್ಟಾರ್ 2008 ರಲ್ಲಿ 75 ಲಕ್ಷ ಹಣ ಕಟ್ಟಿಕೊಡುವಂತೆ ಕೇಳಿದ್ದರು. ಸಾಕಷ್ಟು ವರ್ಷಗಳಿಂದ ಕೋರ್ಟ್ ನಲ್ಲಿ ಇದ್ದ ಕೇಸಿಗೆ ಇದೀಗ ತೆರೆ ಬಿದ್ದಿದ್ದು 75 ಲಕ್ಷ ಹಣವನ್ನು ಗಣೇಶ ಅವರಿಗೆ ಕಟ್ಟಿಕೊಡುವಂತೆ ಮೋಕ್ಷ ಅಗರಬತ್ತಿ ಕಂಪನಿಗೆ ಕೋರ್ಟ್ ಆದೇಶವನ್ನು ನೀಡಿದೆ.
Comments