ಸಿನಿಮಾ ವಿಷಯದಲ್ಲಿ ತುಂಬಾ ಚ್ಯೂಸಿ ಆಗಿರುವ ಕೃಷಿ
'ಬಿಗ್ ಬಾಸ್' ಮನೆಯಿಂದ ಹೊರ ಬಂದ್ಮೇಲೆ, ಕೃಷಿ ತಾಪಂಡಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಬಂದ ಆಫರ್ ಗಳನ್ನೆಲ್ಲ ಒಪ್ಪಿಕೊಳ್ಳದೆ, ಅಳೆದು-ತೂಗಿ ಚಾಯ್ಸ್ ಮಾಡುತ್ತಿದ್ದಾರೆ ನಟಿ ಕೃಷಿ ತಾಪಂಡ.
ತುಂಬಾ ಚ್ಯೂಸಿ ಆಗಿರುವ ಕೃಷಿ ಸರಿ ಸುಮಾರು 27 ಸ್ಕ್ರಿಪ್ಟ್ ಗಳನ್ನು ಕೇಳಿ ರಿಜೆಕ್ಟ್ ಮಾಡಿದ್ದಾರೆ. ಇದೀಗ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಕೃಷಿ. ಆ ಚಿತ್ರವೇ 'ರೂಪಾಯಿ'. ಯುವ ನಿರ್ದೇಶಕ ವಿನೋದ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾ ಇದು. ಡೈರೆಕ್ಷನ್ ಜವಾಬ್ದಾರಿ ಹೊತ್ತುಕೊಂಡಿರುವ ವಿನೋದ್ 'ರೂಪಾಯಿ' ಹೀರೋ ಕೂಡ ಹೌದು. ಏಪ್ರಿಲ್ ನಲ್ಲಿ 'ರೂಪಾಯಿ' ಸಿನಿಮಾ ಸೆಟ್ಟೇರಲಿದ್ದು, ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಕೃಷಿ ತಾಪಂಡ ನಟಿಸಲಿದ್ದಾರೆ. ಸಿನಿಮಾದಲ್ಲಿ ಸ್ಟಂಟ್ ಗಳನ್ನೂ ಮಾಡಲಿದ್ದಾರಂತೆ ಕೃಷಿ.
Comments