ಶಿವರಾಜಕುಮಾರ್ ಎದುರು ವಿಲನ್ ಆಗ್ತಾರಾ ಸಂಜಯ್ ದತ್ ..?

ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡಾ ಈ ಕುರಿತು ಹೇಳುತ್ತಿದ್ದರೇ ಹೊರತು, ಇದುವರೆಗೂ ಚಿತ್ರ ಶುರುವಾಗಿಲ್ಲ. ಈಗ ಮತ್ತೊಮ್ಮೆ ಆ ಚಿತ್ರ ಸುದ್ದಿಯಲ್ಲಿದ್ದು, ಇದರಲ್ಲಿ ಶಿವರಾಜಕುಮಾರ್ ಎದುರು ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಸುದ್ದಿ ಎಲ್ಲಿಂದಲೋ ಬಂದಿದ್ದರೆ, ಅದು ಸುಳ್ಳು ಎನ್ನಬಹುದಿತ್ತು. ಆದರೆ, ಸುದ್ದಿ ಬಂದಿರುವುದು ಖುದ್ದು ನಿರ್ದೇಶಕ ಓಂಪ್ರಕಾಶ್ ರಾವ್ ಅವರಿಂದ. ಹುಚ್ಚ 2' ಚಿತ್ರದ ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ತ್ರಿವಿಕ್ರಮ' ಚಿತ್ರ ಈ ವರ್ಷ ಪ್ರಾರಂಭವಾಗಲಿದ್ದು, ಆ ಚಿತ್ರದಲ್ಲಿ ಸಂಜಯ್ ದತ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ. `ಈಗಾಗಲೇ ಸಂಜಯ್ ದತ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಇದು ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರ. ಕನ್ನಡದಲ್ಲಿ ಶಿವರಾಜಕುಮಾರ್ ನಾಯಕರಾಗಿ ಕಾಣಿಸಿಕೊಂಡರೆ, ಬೇರೆ ಭಾಷೆಗಳಲ್ಲಿ ಆಯಾ ಭಾಷೆಯ ಜನಪ್ರಿಯ ಹೀರೋಗಳು ನಟಿಸುತ್ತಿದ್ದಾರೆ. ಇದು ನನ್ನ ನಿರ್ದೇಶನದ 50ನೇ ಚಿತ್ರವಾಗಲಿದೆ' ಎಂದು ಹೇಳಿದ್ದಾರೆ.
Comments