ನಟಿ ಮಾನ್ವಿತರನ್ನು ಕೊಂಡಾಡಿದ ದಿ ಫೇಮಸ್ ಡೈರೆಕ್ಟರ್

ಟಗರು ಸಿನಿಮಾವನ್ನು ನೋಡಿ ನಟಿ ಮಾನ್ವಿತಾ ಹರೀಶ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾನ್ವಿತಾ ಅವರನ್ನು ಕುರಿತು ಕೊಂಡಾಡಿ ಟ್ವೀಟ್ ಮಾಡಿದ್ದಾರೆ.
ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವ ಜೊತೆಗೆ, ಅವರು ಕೇಳುವ ಸಂಭಾವನೆಗಿಂತ 10 ಲಕ್ಷ ರೂ. ಹೆಚ್ಚಾಗಿ ಕೊಡುವುದಾಗಿ ವರ್ಮಾ ಹೇಳಿಕೊಂಡಿದ್ದರು. ಈ ಕುರಿತು ಮಾತನಾಡಿರುವ ಮಾನ್ವಿತಾ ನಾನು ಬಹಳ ಖುಷಿಯಾಗಿದ್ದೇನೆ. ದೊಡ್ಡ ನಿರ್ದೇಶಕರೊಬ್ಬರು ಅಭಿನಯವನ್ನು ಮೆಚ್ಚಿಕೊಂಡರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ? ನಾನು ಫ್ರೇಮ್ ಟು ಫ್ರೇಮ್ ಚೆನ್ನಾಗಿ ಕಾಣಿಸಿಕೊಂಡಿದ್ದೇನೆ ಎಂದು ವರ್ಮಾ ಹೇಳಿದ್ದಾರೆ. ಅದೇ ನನ್ನ ಮಟ್ಟಿಗೆ ದೊಡ್ಡ ಗೆಲವು ಎಂದಿದ್ದಾರೆ ಮಾನ್ವಿತಾ.
ಇನ್ನು ವರ್ಮಾ ಅವರು ತಮ್ಮ ಮುಂದಿನ ಚಿತ್ರಕ್ಕೆ ಟೋಕನ್ ಅಡ್ವಾನ್ಸ್ ಕೊಟ್ಟಿದ್ದಾರೆ. ಆ ನೋಟನ್ನು ಫ್ರೇಮ್ ಹಾಕಿಸಿಟ್ಟಿದ್ದೀನಿ. ನನಗೆ ದುಡ್ಡು ಮುಖ್ಯವಲ್ಲ. ದೊಡ್ಡ ನಿರ್ದೇಶಕರೊಬ್ಬರು ನನ್ನ ನಟನೆಯನ್ನು ಮೆಚ್ಚಿಕೊಂಡು ತಮ್ಮ ಚಿತ್ರಕ್ಕೆ ಆಫರ್ ನೀಡಿರುವುದು ನನ್ನ ಮಟ್ಟಿಗೆ ದೊಡ್ಡ ಖುಷಿಯ ವಿಚಾರ ಎಂದರು.
Comments