ಹಾಫ್ ಸೆಂಚೂರಿಯತ್ತ ಮುನ್ನುಗುತ್ತಿರುವ 'ಪ್ರೇಮ ಬರಹ'

ಇತ್ತೀಚೆಗೆ ಕನ್ನಡದ ಚಿತ್ರಗಳು 50 ದಿನಗಳನ್ನು ಪೂರೈಸುತ್ತಿರುವುದು ಕಡಿಮೆಯಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಯಶಸ್ವಿಯಾಗಿ 50 ದಿನಗಳನ್ನು ಪೊರೈಸುತ್ತಿವೆ.
ಕಳೆದ ವರ್ಷ ಬಿಡುಗಡೆಯಾಗಿದ್ದ 'ಮಫ್ತಿ', 'ಚಮಕ್', 'ಅಂಜನಿಪುತ್ರ' ಹಾಗೂ 'ರಾಜು ಕನ್ನಡ ಮೀಡಿಯಂ' ಚಿತ್ರಗಳು ಸಕ್ಸಸ್ ಕಂಡಿವೆ. ಈ ಚಿತ್ರಗಳು 50 ದಿನ ಕಂಪ್ಲೀಟ್ ಮಾಡಿವೆ. ಅದರಲ್ಲೂ ಚಮಕ್ ಹಾಗೂ ಮಫ್ತಿ ಚಿತ್ರಗಳು ಸೆಂಚೂರಿ ಬಾರಿಸಿವೆ. ಇದೀಗ 50 ದಿನ ಪೂರೈಸಿರುವ ಚಿತ್ರಗಳ ಸಾಲಿಗೆ 'ಪ್ರೇಮಬರಹ' ಕೂಡ ಸೇರಿಕೊಂಡಂತಾಗಿದೆ. ಸುಂದರವಾದ ಪ್ರೇಮ ಕಥೆಯ ಈ ಚಿತ್ರವನ್ನು ನಟ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಮಗಳು ಐಶ್ವರ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
Comments