ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದೀಪಿಕಾ-ರಣವೀರ್
ಮೂಲಗಳ ಪ್ರಕಾರ ವರ್ಷಾಂತ್ಯದಲ್ಲಿ ದೀಪಿಕಾ ಹಾಗೂ ರಣವೀರ್ ಮದುವೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ನಾಲ್ಕು ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಅದ್ರಲ್ಲಿ ಒಂದು ದಿನಾಂಕವನ್ನು ಕುಟುಂಬಸ್ಥರು ಫೈನಲ್ ಮಾಡಲಿದ್ದಾರೆ.
ದೀಪಿಕಾ ಹಾಗೂ ರಣವೀರ್ ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬಂದಿದ್ದಾರೆ. ಈ ಅವಧಿಯಲ್ಲಿ ಎರಡು ಕುಟುಂಬಗಳು ಅನೇಕ ಬಾರಿ ಭೇಟಿಯಾಗಿ ಮಾತುಕತೆ ನಡೆಸಿವೆ ಎನ್ನಲಾಗಿದೆ. ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಸೆಪ್ಟೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮದುವೆ ನಡೆಯಲಿದೆ. ಮದುವೆಗೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಮಾತ್ರ ಕರೆಯಲು ನಿರ್ಧರಿಸಲಾಗಿದೆ.ಕಳೆದ ವಾರ ತಾಯಿ ಹಾಗೂ ಸಹೋದರಿ ಜೊತೆ ದೀಪಿಕಾ ಆಭರಣ ಖರೀದಿ ಮಾಡಿದ್ದಾರೆ.
Comments