ಮದರ್ಸ್ ಡೇ ಗೆ ಗಿಫ್ಟ್ ನೀಡಲಿರುವ ಚಿರಂಜೀವಿ ಸರ್ಜಾ
ಇದು 'ದ್ವಾರಕೀಶ್ ಚಿತ್ರ' ಬ್ಯಾನರ್‌ನಲ್ಲಿ ರೆಡಿಯಾಗಿರುವ 51ನೇ ಚಿತ್ರ. ಈ ಚಿತ್ರಕ್ಕೆ ಚೈತನ್ಯ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ಜತೆಯಾಗಿ ಕೆಲಸ ಮಾಡಿದ್ದಾರೆ ಚಿರಂಜೀವಿ-ಚೈತನ್ಯ.
ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ 'ಅಮ್ಮ ಐ ಲವ್ ಯೂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮದರ್ಸ್ ಡೇ( ಮೇ 13)ಯಂದು ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ಇನ್ನುಳಿದಂತೆ ಸಿತಾರಾ, ಕರಿಸುಬ್ಬು, ನಟನಾ ಪ್ರಶಾಂತ್ ನಟಿಸಿದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ.
Comments