'ರಾಜರಥ' ಚಿತ್ರ ವೀಕ್ಷಿಸಿ ರಿವ್ಯೂ ಬರೆದ ರಕ್ಷಿತ್ ಶೆಟ್ಟಿ

ಇದೀಗ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ 'ರಾಜರಥ' ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಸ್ವತಃ ಈ ಚಿತ್ರದ ರಿವ್ಯೂ ಬರೆದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ಸಂಜೆ ಚಿತ್ರ ನೋಡಿರುವ ರಕ್ಷಿತ್, ಈ ಕುರಿತು ಟ್ವಿಟರ್‌ನಲ್ಲಿ ಸುದೀರ್ಘ ರಿವ್ಯೂ ಬರೆದಿದ್ದಾರೆ.
ಹಲವು ಭಾವನೆಗಳ ಮೂಲಕ ಈ ಚಿತ್ರವನ್ನು ನಿರ್ಮಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ನಾನು ಥಿಯೇಟರ್‌ಗೆ ಎಂಟ್ರಿ ಕೊಟ್ಟಾಗ ನನ್ನ ಮೈಂಡ್‌ನಲ್ಲಿ ಈ ಚಿತ್ರದಲ್ಲಿಯ ತಪ್ಪಗಳೇನು? ಯಾಕೆ ಈ ರೀತಿ ಕೆಟ್ಟ ರಿವ್ಯೂ ಬರೆದಿದ್ದಾರೆ? ಒಬ್ಬ ಫಿಲ್ಮ್ ಮೇಕಿಂಗ್‌ನ ವಿದ್ಯಾರ್ಥಿಯಾಗಿ ಇದನ್ನು ಕಲಿಯಲು ನಾನು ಬಯಸಿದ್ದೆ. ಆದರೆ, ಈ ಚಿತ್ರ ನೋಡಿದ ಮೇಲೆ ಅನೂಪ್ ಭಂಡಾರಿಯ ಟಾಲೆಂಟ್ ಬಗ್ಗೆ ಮೆಚ್ಚುಗೆಯಾಯಿತು ಎಂದಿದ್ದಾರೆ ರಕ್ಷಿತ್.
Comments