ಐಪಿಎಲ್ ಕನ್ನಡ ಸ್ಟಾರ್ ಸ್ಪೋರ್ಟ್ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಆಯ್ಕೆ
ಸ್ಟಾರ್ ನೆಟವರ್ಕ್‌ನ ಸ್ಟಾರ್ ಸ್ಪೋರ್ಟ್ ಕನ್ನಡದಲ್ಲಿ ಪ್ರಸಾರವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಭಾರಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ.
ಸ್ಟಾರ್ ಇಂಡಿಯಾ ಇದೇ ಮೊದಲ ಸಲ ನಾಲ್ಕು ಪ್ರಾದೇಶಿಕ ಭಾಷೆಗಳಾಗಿರುವ ತಮಿಳು, ತೆಲಗು, ಬಂಗಾಳಿ ಹಾಗೂ ಕನ್ನಡದಲ್ಲಿ ಸ್ಟೋರ್ಟ್ಸ್ ಚಾನೆಲ್ ಪ್ರಸಾರ ಮಾಡಲು ಮುಂದಾಗಿದೆ. ಜತೆಗೆ ಪ್ರಸಕ್ತ ಸಾಲಿನ ಐಪಿಎಲ್ ಪ್ರಸಾರ ಮಾಡಲು ಸಹ ಅವು ಮುಂದಾಗಿವೆ. ಹೀಗಾಗಿ ಕನ್ನಡದ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ ಆಯ್ಕೆಗೊಂಡಿದ್ದಾರೆ. ಇನ್ನು ತಾವೂ ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್, ನಾನು ಯಾವಾಗಲೂ ಕ್ರಿಕೆಟ್ ಉತ್ಸಾಹಿಯಾಗಿದ್ದು, ಬಾಲ್ಯದಿಂದಲೂ ಕ್ರಿಕೆಟ್ ಆಡುತ್ತಲೇ ಬಂದಿರುವೆ. ಜತೆಗೆ ವಿವೋ ಐಪಿಎಲ್ ನಾನು ಪ್ರತಿ ವರ್ಷ ನೋಡುತ್ತಿರುವ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಸ್ಟಾರ್ ಇಂಡಿಯಾ ಜೊತೆಗಿನ ಸಹಯೋಗದ ಬಗ್ಗೆ ನಾನು ಉತ್ಸುಕನಾಗಿರುವೇ ಜತೆಗೆ ನನ್ನ ಮಾತೃಭಾಷೆಯಲ್ಲಿ ಕ್ರಿಕೆಟ್ ಪಂದ್ಯ ನೋಡಿ ಆನಂದಿಸಲು ಮುಂದಾಗಿರುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Comments