ಪಕ್ಷಿಗಳಿಗೆ ನೀರುಣಿಸುವ ಕಾರ್ಯದಲ್ಲಿ ತೊಡಗಿರುವ ರಾಧಿಕಾ ಪಂಡಿತ್



ಹೌದು, ಬೇಸಿಗೆ ಕಾಲ ಬಂತಂದ್ರೆ ಅರಣ್ಯದಲ್ಲಿರುವ ಜೀವಜಲಗಳ ಮೂಲಗಳು ಬರಿದಾಗಿ ಕಾಡು ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಸಿಲುಕುತ್ತವೆ. ನೀರು ಅರಸಿ ನಾಡಿಗೆ ಬರುವ ಪಕ್ಷಿಗಳು ಕೆಲವೊಂದು ಸಾರಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತೆ.
ಮನುಷ್ಯರಾದ ನಮಗೆ ಸಾಕಷ್ಟು ದಾರಿಗಳಿರುತ್ತವೆ. ಆದರೆ ಮೂಕ ಪ್ರಾಣಿ ಪಕ್ಷಿಗಳಿಗೆ? ಹೀಗೆ ಪ್ರಶ್ನೆ ಕೇಳ್ತಿರುವುದು ನಟಿ ರಾಧಿಕಾ ಪಂಡಿತ್. ಚಂದನವನದ ಚೆಲುವೆ ರಾಧಿಕಾ ಪಂಡಿತ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಾಯಾರಿಕೆಯಿಂದ ಬಳಲುವ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಚಿಕ್ಕ ಪುಟ್ಟ ಪಾತ್ರೆಗಳಲ್ಲಿ ನೀರು ತುಂಬಿ ತಮ್ಮ ಮನೆಯ ಮೇಲ್ಭಾಗದಲ್ಲಿಡುತ್ತಿದ್ದಾರೆ. ಬಿರು ಬೇಸಿಗೆಯಲ್ಲಿ ನೀರು ಅರಸಿ ಬರುವ ಪಕ್ಷಿಗಳಿಗೆ ಈ ಮೂಲಕ ನೆರವಾಗುತ್ತಿದ್ದಾರೆ. ಜತೆಗೆ ಈ ರೀತಿ ನೀವು ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
Comments